ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಉಷ್ಣಾಂಶ ಹೆಚ್ಚಿದ ಹಿನ್ನೆಲೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ಹುಲ್ಲು ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಲಿದೆ ಎಂಬ ಉದ್ದೇಶದಂದ ಸುತ್ತಮುತ್ತಲ ಪ್ರದೇಶದಲ್ಲಿರುವ ಹಾಡಿಗಳು ಮತ್ತು ಕುರಿಗಾಹಿಗಳು ಈ ಬೆಂಕಿ ಹಾಕಿರಬಹುದೆಂದು ಶಂಕಿಸಲಾಗಿದೆ.
ಜಾಣೆಹಾರ್ ಕಣಿವೆಗೆ ಬೆಂಕಿ... 8 ಎಕರೆ ಹುಲ್ಲುಗಾವಲು ಭಸ್ಮ - ಹುಲ್ಲುಗಾವಲು ಭಸ್ಮ
ತುಮಕೂರು: ಬಿಸಿಲಿನ ತಾಪಮಾನ ಮತ್ತು ದುಷ್ಕರ್ಮಿಗಳ ಕೃತ್ಯಕ್ಕೆ ಚಿಕ್ಕನಾಯನಕಹಳ್ಳಿ ತಾಲೂಕಿನ ಜಾಣೆಹಾರ್ ಕಣಿವೆ ಸುತ್ತಮುತ್ತಲ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 8 ಎಕರೆ ಪ್ರದೇಶದ ಹುಲ್ಲುಗಾವಲು ಸುಟ್ಟು ಕರಕಲಾಗಿದೆ.
ಹುಲ್ಲುಗಾವಲು ಭಸ್ಮ
ಒಂದೇ ದಿನದಲ್ಲಿ 8 ಎಕರೆ ಪ್ರದೇಶದಲ್ಲಿದ್ದ ಹುಲ್ಲುಗಾವಲು ಸುಟ್ಟು ಕರಕಲಾಗಿದೆ. ಅರಣ್ಯ ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಬೆಂಕಿ ಬಹುಬೇಗ ವ್ಯಾಪಿಸುತ್ತಿದೆ. ಇದರಿಂದಾಗಿ ಹಗಲು ರಾತ್ರಿ ಎನ್ನದೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.