ಕರ್ನಾಟಕ

karnataka

ETV Bharat / state

ಹೆಬ್ಬಾಳ್ಕರ್  ಒಡೆತನದ ಹರ್ಷ ಶುಗರ್ಸ್ ಗೆ 300 ಕೋಟಿ ಸಾಲ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣಗೆ ಇಡಿ ನೋಟಿಸ್ - latest ed notice news

ಅ.8ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ವತಿಯಿಂದ ನೋಟೀಸ್ ಜಾರಿಗೊಳಿಸಲಾಗಿದೆಯೆಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಡೆತನದ ಹರ್ಷ ಶುಗರ್ಸ್ ಗೆ 300 ಕೋಟಿ ರೂ.ಅನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿತ್ತು ಈ ಕುರಿತಂತೆ ಮಾಹಿತಿ ಪಡೆಯಲು ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಹರ್ಷ ಶುಗರ್ಸ್ ಗೆ 300 ಕೋಟಿ ಸಾಲ : ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣಗೆ ಇಡಿ ನೋಟಿಸ್

By

Published : Oct 1, 2019, 3:10 PM IST

ತುಮಕೂರು: ಅ.8ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಾವ ರೀತಿಯ ವಿಚಾರಣೆಗೆ ಎಂದು ನೋಟಿಸ್​ನಲ್ಲಿ ಸ್ಟಷ್ಟವಾಗಿ ತಿಳಿಸಿಲ್ಲವೆಂದು ಹೇಳಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಡೆತನದ ಹರ್ಷ ಶುಗರ್ಸ್ ಗೆ 300 ಕೋಟಿ ರೂ.ಅನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿತ್ತು ಈ ಕುರಿತಂತೆ ಮಾಹಿತಿ ಪಡೆಯಲು ಇರಬಹುದೆಂದು ಶಂಕೆ ವ್ಯಕ್ತಪಡಿಸಿದರು.

ಹರ್ಷ ಶುಗರ್ಸ್ ಗೆ 300 ಕೋಟಿ ಸಾಲ : ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣಗೆ ಇಡಿ ನೋಟಿಸ್

ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ಒಳಗೊಂಡ ಅಪೆಕ್ಸ್ ಬ್ಯಾಂಕ್​ನಿಂದ 300 ಕೋಟಿ ಸಾಲ ನೀಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಾಲ ಪಡೆದ ಸಂದರ್ಭದಲ್ಲಿ ಯಾವ ದಾಖಲೆಗಳನ್ನು ಹಾಜರುಪಡಿಸಿದ್ದಾರೆಂಬ ಮಾಹಿತಿ ಪಡೆಯಲು ಇಡಿ ಅಧಿಕಾರಿಗಳು ನನಗೆ ಹಾಜರಾಗಲು ಕರೆದಿರಬಹುದೆಂದು ಹೇಳಿದರು. ತುಮಕೂರು ಡಿಸಿಸಿ ಬ್ಯಾಂಕಿನಿಂದ 25 ಕೋಟಿ, ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ ನಿಂದ 100 ಕೋಟಿ, ಬಿಜಾಪುರ ಡಿಸಿಸಿ ಬ್ಯಾಂಕ್ ನಿಂದ 10 ಕೋಟಿ, ಬಾಗಲಕೋಟಿ ಡಿಸಿಸಿ ಬ್ಯಾಂಕ್ ನಿಂದ 40 ಕೋಟಿ ರೂ. ಸೇರಿದಂತೆ ಒಟ್ಟು 300 ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details