ತುಮಕೂರು: ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಲಿ ಹಾಗೂ ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳಿ ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರ ರಥದ ಮೇಲೆ ಎಸೆದು ಬೇಡಿಕೆ ಇಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
'ರಷ್ಯಾ-ಉಕ್ರೇನ್ ಯುದ್ಧ ನಿಲ್ಲಲಿ, ಭಾರತೀಯರು ಸುರಕ್ಷಿತವಾಗಿ ಬರಲಿ': ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ತೂರಿದ ಭಕ್ತರು - Russia-Ukraine War Crisis
ತುಮಕೂರಿನ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಬಾಳೆಹಣ್ಣಿನ ಮೇಲೆ 'ರಷ್ಯಾ - ಉಕ್ರೇನ್ ಯುದ್ಧ ನಿಲ್ಲಲಿ, ಭಾರತೀಯರು ಸುರಕ್ಷಿತವಾಗಿ ಬರಲಿ' ಎಂದು ಬರೆದು ದೇವರಲ್ಲಿ ಪರಿಪರಿಯಾಗಿ ಬೇಡಿಕೊಂಡರು.
ತುಮಕೂರಿನ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ
ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಬಾಳೆಹಣ್ಣಿನ ಮೇಲೆ 'ರಷ್ಯಾ-ಉಕ್ರೇನ್ ಯುದ್ಧ ನಿಲ್ಲಲಿ, ಭಾರತೀಯರು ಸುರಕ್ಷಿತವಾಗಿ ಬರಲಿ' ಎಂದು ಬರೆದು ದೇವರಲ್ಲಿ ಪರಿಪರಿಯಾಗಿ ಬೇಡಿಕೊಂಡರು. ಜಾತ್ರಾ ಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಬಾಳೆಹಣ್ಣು ಎಸೆಯುವ ಪದ್ಧತಿ ಹಿಂದಿನಿಂದ ಇದೆ.
ಇದನ್ನೂ ಓದಿ:ರೊಮೇನಿಯಾ, ಪೋಲೆಂಡ್, ಹಂಗೇರಿಯಿಂದ 3 ವಿಮಾನಗಳಲ್ಲಿ 628 ಭಾರತೀಯರ ರಕ್ಷಣೆ