ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿದ್ದಾರೆ. ಅವರೆಲ್ಲರೂ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ಚಲಾವಣೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ನ ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.
ದೇವೇಗೌಡರ ಗೆಲುವು ರಾಷ್ಟ್ರಕ್ಕೂ, ರಾಜ್ಯಕ್ಕೂ ಒಂದು ಹೆಮ್ಮೆ: ಮಾಜಿ ಸಚಿವೆ ರಾಣಿ ಸತೀಶ್ - ತುಮಕೂರು ಲೋಕಸಭಾ ಕ್ಷೇತ್ರ
1964ರಲ್ಲಿ ಹೇಮಾವತಿ ನದಿ ನೀರು ಯೋಜನೆಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇವೇಗೌಡರಿಂದ ಕ್ಷೇತ್ರಕ್ಕೆ ಇನ್ನಷ್ಟು ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದು ಕಾಂಗ್ರೆಸ್ನ ಮಾಜಿ ಸಚಿವೆ ರಾಣಿ ಸತೀಶ್ ಹೇಳಿದ್ದಾರೆ.
ಮಾಜಿ ಸಚಿವೆ ರಾಣಿ ಸತೀಶ್
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 8 ಲಕ್ಷ ಮಹಿಳಾ ಮತದಾರರಿದ್ದು, ಅವರೆಲ್ಲರೂ ದೇವೇಗೌಡರಿಗೆ ಬೆಂಬಲಿಸಲಿದ್ದಾರೆ ಎಂದರು. 1964ರಲ್ಲಿ ಹೇಮಾವತಿ ನದಿ ನೀರು ಯೋಜನೆಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ದೇವೇಗೌಡರು ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇವೇಗೌಡರಿಂದ ಕ್ಷೇತ್ರಕ್ಕೆ ಇನ್ನಷ್ಟು ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಗೆಲುವಿನಿಂದ ರಾಷ್ಟ್ರಕ್ಕೂ ಹಾಗೂ ರಾಜ್ಯಕ್ಕೂ ಒಂದು ರೀತಿ ಹೆಮ್ಮೆ ಇರುತ್ತದೆ ಎಂದರು.