ತುಮಕೂರು:ರಾಜ್ಯದಲ್ಲಿ ಐದು ದಿನಗಳ ಕಾಲ ಭಾರತ್ ಜೋಡೋ ಪಾದಯಾತ್ರೆ ನಡೆಯಲಿದ್ದು ಯಾರೂ ಕೂಡಾ ರಾಹುಲ್ ಗಾಂಧಿಯವರಿಗೆ ಹೂವಿನ ಹಾರ ಹಾಕಬೇಡಿ. ಬದಲಾಗಿ ಅವರೊಂದಿಗೆ ಹೆಜ್ಜೆ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಹೂಹಾರ ಹಾಕಬೇಡಿ: ಡಿಕೆಶಿ - ಈಟಿವಿ ಭಾರತ ಕನ್ನಡ
ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಹೂವಿನ ಹಾರ ಹಾಕುವ ಬದಲು ಅವರೊಂದಿಗೆ ಹೆಜ್ಜೆ ಹಾಕಿ ಎಂದು ಜನರಿಗೆ ಡಿಕೆಶಿ ಮನವಿ ಮಾಡಿದ್ದಾರೆ.
ಡಿಕೆ ಶಿವಕುಮಾರ್
ಪಾದಯಾತ್ರೆ ಸಾಗುವ ಮಾರ್ಗ ಈಗಾಗಲೇ ನಿಗದಿಯಾಗಿದೆ. ಆ ಮಾರ್ಗದ ಎಲ್ಲೆಡೆ ಪರಿಶೀಲನೆ ನಡೆಸಲಾಗುತ್ತಿದೆ. ರೈತರ ಸಮಸ್ಯೆ ಸೇರಿದಂತೆ ದೇಶದಲ್ಲಿ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಹಾಗೂ ಸಾಮರಸ್ಯದ ತೋಟವಾಗಿ ರೂಪಿಸಲು ಈ ಯಾತ್ರೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಕೊಲ್ಲಂನಲ್ಲಿ ಸಾಗಿದ ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ': ರಾಹುಲ್ಗೆ ಬೆಂಬಲಿಗರ ಸಾಥ್