ತುಮಕೂರು:ಕುಣಿಗಲ್ ತಾಲೂಕಿನ ಬಿದನಗೆರೆ ಶ್ರೀ ಬಸವೇಶ್ವರ ಮಠದ ವತಿಯಿಂದ ನಿರ್ಮಿಸಲಾದ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಸಿಎಂ ಬೊಮ್ಮಾಯಿ ಇಂದು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯಾಗಿರುವುದು ಮುಂದಿನ ದಿನಗಳಲ್ಲಿ ಕನ್ನಡನಾಡಿಗೆ ಒಳ್ಳೆಯ ಕಾಲವಿದೆ ಎನ್ನುವುದರ ಸೂಚನೆ ಎಂದರು.
161 ಅಡಿ ಎತ್ತರದ ಆಂಜನೇಯ ಮೂರ್ತಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ಬಸವೇಶ್ವರ ಮಠದ ವತಿಯಿಂದ ನಿರ್ಮಿಸಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಉದ್ಘಾಟಿಸಿದರು.
ರಾಮನವಮಿಯ ದಿನದಂದು ಪವಿತ್ರ ಕಾರ್ಯಗಳು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿವೆ. ಇಲ್ಲಿಯ ಅಭಿವೃದ್ಧಿ ಕಾರ್ಯಗಳಿಂದ ಕೆಲವೇ ವರ್ಷಗಳಲ್ಲಿ ಎಷ್ಟು ದೊಡ್ಡ ಶಕ್ತಿಯಾಗಿ ಕ್ಷೇತ್ರ ಬೆಳೆದಿದೆ ಎಂದು ತಿಳಿಯುತ್ತದೆ. ಇಲ್ಲಿನ ಭಕ್ತರ ಮನಸ್ಸು ಬಹಳ ದೊಡ್ಡದು. ಪಂಚಮುಖಿ ಆಂಜನೇಯ ಬಹಳ ವಿಶಿಷ್ಟ. ರಾಮಾಯಣದಲ್ಲಿ ವಿಶೇಷವಾದ ಸಂದರ್ಭದಲ್ಲಿ ಹನುಮನ ಅವತಾರವಿದು. ಸಂಪೂರ್ಣವಾಗಿ ಲೋಕಕಲ್ಯಾಣಕ್ಕಾಗಿ ಹನುಮ ಈ ಅವತಾರವನ್ನು ಎತ್ತಿದ. ಕನ್ನಡನಾಡಿನಲ್ಲಿ 161 ಅಡಿ ಎತ್ತರದ ಮೂರ್ತಿ ಸ್ಥಾಪನೆಯಾಗಿರುವುದು ಹನುಮನ ಇಚ್ಛೆ. ಶಿಲ್ಪಿಗಳು ಅದ್ಭುತವಾದ ಕಲಾಕೃತಿ ನಿರ್ಮಿಸಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಮನವಮಿ: ಪಾನಕ, ಕೋಸಂಬರಿ ವಿತರಿಸಿದ ಹೆಚ್ಡಿಕೆ