ತುಮಕೂರು:ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮೇಶಯ್ಯ ಮೇಲಿನ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಪ್ರಕಟಗೊಳ್ಳಲಿದೆ.
ನಗರದ ಅಂತರಸನಹಳ್ಳಿ ಸೇತುವೆ ಬಳಿ 2017ರ ಜನವರಿ 15ರಂದು ರಾತ್ರಿ ಪಾಳಿಯಲ್ಲಿದ್ದ ಮಹಿಳಾ ಠಾಣೆಯ ಎಎಸೈ ಉಮೇಶಯ್ಯ ಹೋಗುತ್ತಿದ್ದ ವೇಳೆ ಬುದ್ಧಿಮಾಂಧ್ಯೆಯನ್ನು ಖಾಸಗಿ ಜೀಪಿನಲ್ಲಿ ಕೂರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಓದಿ:ಸಿಎಂ ಭೇಟಿ ಮಾಡಿದ ಸಚಿವ ಉಮೇಶ್ ಕತ್ತಿ - ಸವದಿ ನೇತೃತ್ವದ ನಿಯೋಗ: ಗರಿಗೆದರಿದ ಬಣ ರಾಜಕೀಯ
ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೆಚ್ಎಸ್ ಮಲ್ಲಿಕಾರ್ಜುನಸ್ವಾಮಿ ಅವರು ಉಮೇಶಯ್ಯ ತಪ್ಪಿತಸ್ಥ ಎಂದು ಜನವರಿ 28ರಂದು ತೀರ್ಪು ನೀಡಿದ್ದಾರೆ.
ಜನವರಿ 31ರಂದು ಉಮೇಶಯ್ಯನಿಗೆ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ. ಸರ್ಕಾರಿ ಅಭಿಯೋಜಕಿ ಕವಿತಾ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಎರಡನೇ ಆರೋಪಿ ಖಾಸಗಿ ವಾಹನ ಚಾಲಕ ಈಶ್ವರ್ನನ್ನು ನ್ಯಾಯಾಲಯ ಆರೋಪದಿಂದ ಮುಕ್ತಿಗೊಳಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ