ಕರ್ನಾಟಕ

karnataka

ETV Bharat / state

ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ಸೇತುವೆಯಾಗಿ ರೈತಪರ ಯೋಜನೆ ಅನುಷ್ಠಾನಗೊಳಿಸುವೆ : ಸಚಿವೆ ಕರಂದ್ಲಾಜೆ - ತುಮಕೂರಿನ ಸಿದ್ದಗಂಗಾ ಮಠ ಸುದ್ದಿ

ಕೇಂದ್ರದ ಕೃಷಿ ಸಚಿವೆಯಾದ ನಂತರ ಸಿದ್ದಗಂಗಾ ಮಠಕ್ಕೆ ಬಂದಿದ್ದೇನೆ. ಸಿದ್ದಗಂಗಾ ಶ್ರೀಗಳು ಇಡೀ ನಾಡಿಗೆ, ದೇಶಕ್ಕೆ ಪ್ರೇರಣೆಯಾದವರು.10 ಸಾವಿರ ಮಕ್ಕಳಿಗೆ ಪ್ರತಿನಿತ್ಯ ತ್ರಿವಿಧ ದಾಸೋಹ ನೀಡಿದ ವ್ಯಕ್ತಿತ್ವ ಅವರದ್ದಾಗಿತ್ತು. ಯಡಿಯೂರಪ್ಪನವರ ಜೊತೆ ಬಂದಾಗ ಮಕ್ಕಳ ಶಿಕ್ಷಣದ ಬಗ್ಗೆ ಕೃಷಿ, ನೀರಾವರಿ ಬಗ್ಗೆ ಮಾತನಾಡುತ್ತಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮೊಂದಿಗೆ ಇಲ್ಲ. ಆದ್ರೆ, ಅವರ ಪ್ರೇರಣೆ ಮತ್ತು ಆಶೀರ್ವಾದ ನಮ್ಮ ಜೊತೆ ಇದೆ ಎಂದುಕೊಂಡಿದ್ದೇನೆ..

central minister shobha karanlaje visits to tumkur matt
ಸಚಿವೆ ಶೋಭಾ ಕರಂದ್ಲಾಜೆ ತುಮಕೂರು ಭೇಟಿ

By

Published : Aug 21, 2021, 7:58 PM IST

ತುಮಕೂರು: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ರಾಜ್ಯದ ರೈತರು ಸದುಪಯೋಗ ಪಡಿಸಿಕೊಳ್ಳುವ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೊಂಡಿಯಾಗಿದ್ದುಕೊಂಡು ಕೆಲಸ ಮಾಡುತ್ತಿದ್ದೇನೆ, ರೈತನ ಬದುಕನ್ನು ಹಸನು ಮಾಡಲು ಬದ್ಧಳಾಗಿದ್ದೇನೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ತುಮಕೂರು ಭೇಟಿ ವೇಳೆ ಮಾತನಾಡಿರುವುದು..

ಸಿದ್ದಗಂಗಾ ಮಠಕ್ಕೆ ಭೇಟಿ :ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನಂತರ ಸಚಿವೆ ಕರಂದ್ಲಾಜೆ ಮಾಧ್ಯಮದವರೊಂದಿಗೆ ಮಾತನಾಡಿದ್ರು. ರಾಜ್ಯ ಕೃಷಿ ಸಚಿವ ಬಿ ಸಿ ಪಾಟೀಲ್ ಜೊತೆ ಸಭೆ ನಡೆಸಲು ಸಿದ್ಧತೆ ನಡೆಸಿದ್ದು, ರೈತನಿಗೆ ಆದಾಯ ತರುವ ರೀತಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಸ್ವಾಮೀಜಿಯವರ ಆಶೀರ್ವಾದ ನಮ್ಮ ಜತೆ ಇದೆ :ಕೇಂದ್ರದ ಕೃಷಿ ಸಚಿವೆಯಾದ ನಂತರ ಸಿದ್ದಗಂಗಾ ಮಠಕ್ಕೆ ಬಂದಿದ್ದೇನೆ. ಸಿದ್ದಗಂಗಾ ಶ್ರೀಗಳು ಇಡೀ ನಾಡಿಗೆ, ದೇಶಕ್ಕೆ ಪ್ರೇರಣೆಯಾದವರು.10 ಸಾವಿರ ಮಕ್ಕಳಿಗೆ ಪ್ರತಿನಿತ್ಯ ತ್ರಿವಿಧ ದಾಸೋಹ ನೀಡಿದ ವ್ಯಕ್ತಿತ್ವ ಅವರದ್ದಾಗಿತ್ತು. ಯಡಿಯೂರಪ್ಪನವರ ಜೊತೆ ಬಂದಾಗ ಮಕ್ಕಳ ಶಿಕ್ಷಣದ ಬಗ್ಗೆ ಕೃಷಿ, ನೀರಾವರಿ ಬಗ್ಗೆ ಮಾತನಾಡುತ್ತಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮೊಂದಿಗೆ ಇಲ್ಲ. ಆದ್ರೆ, ಅವರ ಪ್ರೇರಣೆ ಮತ್ತು ಆಶೀರ್ವಾದ ನಮ್ಮ ಜೊತೆ ಇದೆ ಎಂದುಕೊಂಡಿದ್ದೇನೆ ಎಂದರು.

ತೆಂಗು ಬೆಳೆಗಾರರಿಗೆ ಅನುಕೂಲ :ಈ ನಾಡಿನ ರೈತರ ಸೇವೆ ಮಾಡುವ ಸೌಭಾಗ್ಯ ನಮಗೆ ಸಿಕ್ಕಿದೆ. ಕರಾವಳಿ, ತುಮಕೂರು ಹಾಗೂ ದಕ್ಷಿಣ ಭಾರತದಲ್ಲಿ ಬೆಳೆಯುವ ತೆಂಗಿಗೆ ದೇಶದಲ್ಲಿ ಮಾತ್ರ ಮಾರುಕಟ್ಟೆ ಇತ್ತು, ವಿದೇಶಕ್ಕೆ ರಫ್ತು ಮಾಡಲು ಅವಕಾಶವಿರಲಿಲ್ಲ, ನಿಷೇಧವಿತ್ತು. ಆದ್ರೆ, ಕಳೆದ ಬಾರಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತೆಂಗಿನ ಉತ್ಪನ್ನಗಳ ರಪ್ತು ನಿಷೇಧವನ್ನು ರದ್ದುಗೊಳಿಸಿದೆ. ಇದ್ರಿಂದಾಗಿ ತೆಂಗು ಬೆಳೆಯುವ ರೈತನಿಗೆ ಬೆಲೆ ಜಾಸ್ತಿ ಸಿಗಲಿದೆ. ಇದರಿಂದ ತೆಂಗು ಬೆಳೆಗಾರನಿಗೆ ಅನುಕೂಲವಾಗಲಿದೆ ಎಂದ್ರು.

ತೆಂಗು ಬೆಳೆಯುವ ರೈತನೇ ಅಧ್ಯಕ್ಷ :ಇಷ್ಟು ವರ್ಷಗಳ ಕಾಲ ತೆಂಗಿನ ಮರ ನೋಡದ, ತೆಂಗಿನ ಬಗ್ಗೆ ಅರಿವು ಇಲ್ಲದವರು ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಗೆ ಚೇರ್ಮನ್​​ ಆಗಿದ್ದರು. ಇನ್ನು ಮುಂದೆ ತೆಂಗು ಬೆಳೆಯುವ ರೈತನೇ ಮಂಡಳಿಗೆ ಅಧ್ಯಕ್ಷನಾಗುತ್ತಾನೆ. ಇದರಿಂದ ಇನ್ನಷ್ಟು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

25 ಯೋಜನೆಗಳು ಜಾರಿಗೆ :ರೈತನಿಗೆ ನ್ಯಾಯ ಸಿಗಬೇಕೆಂದು ಪ್ರಧಾನಿ ಮೋದಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೈತನ ಉತ್ಪಾದನೆಗಳಿಗೆ ಉತ್ತಮ ಮಾರುಕಟ್ಟೆ ಲಭಿಸಲು 25 ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ಮುಂದಿನ 2 ವರ್ಷದಲ್ಲಿ ದೇಶದಲ್ಲಿ ತೈಲೋತ್ಪಾದನೆ ಹೆಚ್ಚಿಸಬೇಕಿದೆ. ಖಾದ್ಯ ತೈಲದಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಪ್ರಧಾನಿ ಮೋದಿಯವರ ಅಭಿಲಾಷೆ.

ವಿದೇಶಿ ವಿನಿಮಯ ತಪ್ಪಿಸಬೇಕಿದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಅನುಕೂಲಕ್ಕಾಗಿ ಪ್ರಧಾನಿ ಗುರಿ ಹೊಂದಿದ್ದು, ಅದು ಕಿಸಾನ್ ಸಮ್ಮಾನ್, ಫಸಲ್ ಭೀಮಾದ ಸರಳೀಕರಣ, ಸಣ್ಣ ನೀರಾವರಿಗೆ ಆದ್ಯತೆ, ಈ ರೀತಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ರು.

ABOUT THE AUTHOR

...view details