ಕರ್ನಾಟಕ

karnataka

ETV Bharat / state

ಟಿವಿಎಸ್ ಮೊಪೆಡ್​ಗೆ ಬಸ್ ಡಿಕ್ಕಿ... ಇಬ್ಬರು ಸ್ಥಳದಲ್ಲಿಯೇ ದುರ್ಮರಣ - ಟಿವಿಎಸ್ ಮೊಪೆಡ್​​

ಟಿವಿಎಸ್ ಮೊಪೆಡ್​​ನಲ್ಲಿ ಮಧುಗಿರಿಯಿಂದ ಕಾವಾಡಿಗರ ಪಾಳ್ಯಕ್ಕೆ ಹೋಗುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.

ಟಿವಿಎಸ್ ಮೊಪೆಡ್​ಗೆ ಬಸ್ ಡಿಕ್ಕಿ

By

Published : Jun 20, 2019, 2:09 AM IST

ತುಮಕೂರು: ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಮೊಪೆಡ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಬಳಿ ಸಂಭವಿಸಿದೆ.

ಮೃತರನ್ನು ಮಧುಗಿರಿ ತಾಲೂಕಿನ ಕಾವಾಡಿಗರ ಪಾಳ್ಯದ ಶಿವಣ್ಣ(48) ಹಾಗೂ ಮಧುಗಿರಿ ಪಟ್ಟಣದ ಬೀರಲಿಂಗಪ್ಪ (50) ಎಂದು ಗುರುತಿಸಲಾಗಿದೆ.

ಟಿವಿಎಸ್ ಮೊಪೆಡ್​​ನಲ್ಲಿ ಮಧುಗಿರಿಯಿಂದ ಕಾವಾಡಿಗರ ಪಾಳ್ಯಕ್ಕೆ ಹೋಗುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details