ಕರ್ನಾಟಕ

karnataka

By

Published : Aug 24, 2020, 10:06 PM IST

Updated : Aug 24, 2020, 10:54 PM IST

ETV Bharat / state

ಶಾಸಕ ಮಸಾಲೆ ಜಯರಾಂ ವಿರುದ್ಧ ಬ್ಯಾನರ್​: ಹಾಲಿ-ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ

ಅವಹೇಳನಕಾರಿ ಪದ ಬಳಸಿ ಶಾಸಕ ಮಸಾಲೆ ಜಯರಾಂ ವಿರುದ್ಧ ಹಾಕಲಾಗಿದ್ದ ಬ್ಯಾನರ್​ನ್ನು ತೆರವುಗೊಳಸಿದ್ದಕ್ಕೆ, ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ದಿಢೀರ್ ಧರಣಿ ನಡೆಸಲಾಯಿತು. ಈ ವೇಳೆ ಮಾಜಿ ಶಾಸಕ ಮತ್ತು ಹಾಲಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕ ಮಸಾಲೆ ಜಯರಾಂ ವಿರುದ್ಧ ಬ್ಯಾನರ್
ಶಾಸಕ ಮಸಾಲೆ ಜಯರಾಂ ವಿರುದ್ಧ ಬ್ಯಾನರ್

ತುಮಕೂರು: ಕೊಲೆಗಡುಕ ಶಾಸಕ ಮಸಾಲೆ ಜಯರಾಂ ಎಂದು ಹಾಕಲಾಗಿದ್ದ, ಬ್ಯಾನರ್​ನ್ನು ತುರುವೇಕೆರೆ ಪಟ್ಟಣದ ಪಟ್ಟಣ ಪಂಚಾಯತ್​ ವತಿಯಿಂದ ತೆರವುಗೊಳಿಸಿದ್ದನ್ನು ವಿರೋಧಿಸಿ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ದಿಢೀರ್ ಧರಣಿ ನಡೆಸಲಾಯಿತು. ಇನ್ನೊಂದೆಡೆ ಸ್ಥಳಕ್ಕಾಗಮಿಸಿದ ಶಾಸಕ ಮಸಾಲೆ ಜಯರಾಂ ಬೆಂಬಲಿಗರು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ವಿರುದ್ಧ ಘೋಷಣೆ ಕೂಗಿದರು.

ಒಂದು ಹಂತದಲ್ಲಿ ಶಾಸಕ ಮಸಾಲೆ ಜಯರಾಂ ಮತ್ತು ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪ ನಡುವೆ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಎರಡೂ ಕಡೆಯವರ ನಡುವೆ ತಳ್ಳಾಟ ನೂಕಾಟ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಎರಡು ಗುಂಪುಗಳನ್ನು ತಡೆದು ಸಮಾಧಾನ ಪಡಿಸಲು ಹರಸಾಹಸಪಟ್ಟರು. ಎರಡೂ ಕಡೆಯಿಂದಲೂ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.

ಹಾಲಿ-ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ

ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಆಗಸ್ಟ್ 30ರಂದು ಶಾಸಕ ಮಸಾಲೆ ಜಯರಾಂ ವಿರುದ್ಧ ತುರುವೇಕೆರೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ತುರುವೇಕೆರೆಯಲ್ಲಿ ಜೆಡಿಎಸ್ ವತಿಯಿಂದ ಕಟೌಟ್​ನನ್ನು ಹಾಕಲಾಗಿತ್ತು. ಅದರಲ್ಲಿ ‘ದೌರ್ಜನ್ಯದ ಮೂಲಕ ತೆಂಗಿನ ಸಸಿಗಳನ್ನು ಕೀಳಿಸಿ, ಹೆಣ್ಣು ಮಕ್ಕಳ ಮೇಲೆ ಲಾಠಿ ಚಾರ್ಜ್​ ಮಾಡಿಸಿದಂತಹ ಕೊಲೆಗಡುಕ ಶಾಸಕ ಮಸಾಲೆ ಜಯರಾಂ ಅವರ ವಿರುದ್ಧ ಹಾಗೂ ಈ ಕ್ಷೇತ್ರದ ರೈತರ ಉಳುವಿಗಾಗಿ” ಎಂಬುದಾಗಿ ಬರೆದು ಬ್ಯಾನರ್​ನನ್ನು ತುರುವೇಕೆರೆ ಪಟ್ಟಣದಲ್ಲಿ ಹಾಕಲಾಗಿತ್ತು. ಇದನ್ನು ಸಂಜೆ ಮಸಾಲೆ ಜಯರಾಂ ತೆರವುಗೊಳಿಸಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮತ್ತು ಶಾಸಕ ಮಸಾಲೆ ಜಯರಾಂ ನಡುವೆ ವಾಗ್ವಾದ ನಡೆಯಿತು. ನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

Last Updated : Aug 24, 2020, 10:54 PM IST

ABOUT THE AUTHOR

...view details