ತುಮಕೂರು:ಟೋಲ್ ಹಣ ಕಟ್ಟುವ ಸಂಬಂಧ ದುಷ್ಕರ್ಮಿಗಳ ತಂಡವೊಂದು ಟೋಲ್ ಸಿಬ್ಬಂದಿಗೆ ಥಳಿಸಿದ್ದಲ್ಲದೇ ದಾಂಧಲೆ ನಡೆಸಿ ಪರಾರಿಯಾಗಿರುವ ಘಟನೆ ಶಿರಾ ತಾಲೂಕು ಕರಜೀವನಹಳ್ಳಿ ಟೋಲ್ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಹಣದ ವಿಚಾರಕ್ಕೆ ಗಲಾಟೆ... ಟೋಲ್ ಗೇಟ್ ಸಿಬ್ಬಂದಿಗೆ ಥಳಿಸಿದ ದುಷ್ಕರ್ಮಿಗಳು!
ದುಷ್ಕರ್ಮಿಗಳ ತಂಡವೊಂದು ಹಣದ ವಿಚಾರವಾಗಿ ಗಲಾಟೆ ಆರಂಭವಾಗಿ ಟೋಲ್ ಸಿಬ್ಬಂದಿಗೆ ಥಳಿಸಿರುವ ಘಟನೆ ಶಿರಾ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಟೋಲ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ದುಷ್ಕರ್ಮಿಗಳ ದಾಂಧಲೆಯಿಂದ ಹಾನಿಗೊಳಗಾದ ಕರಜೀವನಹಳ್ಳಿ ಟೋಲ್
ಟೋಲ್ ಹಣ ಪಾವತಿಸುವುದಿಲ್ಲ ಎಂದು ಪುಂಡರ ಗುಂಪು ಟೋಲ್ ಸಿಬ್ಬಂದಿಗೆ ಥಳಿಸಿದೆ. ಇದರಿಂದ ಇಬ್ಬರು ಟೋಲ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಲ್ಲದೆ ರೊಚ್ಚಿಗೆದ್ದ ಗುಂಪು ಟಿಕೆಟ್ ನೀಡುವ ಕೌಂಟರ್ಗೂ ಹಾನಿ ಮಾಡಿದೆ. ಇಷ್ಟಕ್ಕೂ ಸುಮ್ಮನಾಗದ ದುಷ್ಕರ್ಮಿಗಳು, ಕಚೇರಿ ಒಳಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಹಲ್ಲೆಯಿಂದ ಮಹಾರಾಷ್ಟ ಮೂಲದ ಕೆಲಸಗಾರರಿಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕಳ್ಳಂಬಳ್ಳ ಪೊಲೀಸರು ಸಿಸಿಟಿವಿ ಫೂಟೇಜ್ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.