ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆಯ ಗಸ್ತು ವಾಹನವನ್ನೇ ಅಪಹರಿಸಿದ ಭೂಪ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ 112 ನಂಬರ್​ ವಾಹನವನ್ನೇ ವ್ಯಕ್ತಿಯೊಬ್ಬ ಅಪಹರಿಸಿರುವ ಘಟನೆ ನಡೆದಿದೆ.

ತುಮಕೂರು
ತುಮಕೂರು

By ETV Bharat Karnataka Team

Published : Nov 21, 2023, 3:06 PM IST

Updated : Nov 21, 2023, 3:30 PM IST

ತುಮಕೂರು : ಜಿಲ್ಲಾ ಪೊಲೀಸ್ ಇಲಾಖೆಯ ಗಸ್ತು ವಾಹನ 112 ಅನ್ನು ವ್ಯಕ್ತಿಯೊಬ್ಬ ಅಪಹರಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ. ಮುನಿಯ ಎಂಬಾತನೇ 112 ವಾಹನವನ್ನು ಅಪಹರಿಸಿದ ವ್ಯಕ್ತಿಯಾಗಿದ್ದಾನೆ.

ತಡರಾತ್ರಿ ಗ್ರಾಮದ ಸಹೋದರರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ವೇಳೆ, ಆರೋಪಿ ಸಹೋದರ 112ಕ್ಕೆ ಕರೆ ಮಾಡಿದ್ದ. ಜಗಳ ಬಿಡಿಸಲು ಗ್ರಾಮಕ್ಕೆ 112 ವಾಹನದಲ್ಲಿ‌ ಪೊಲೀಸರು ಬಂದಿದ್ದರು. ಈ ವೇಳೆ 112 ವಾಹನದ ಹಿಂಬದಿಯ ಗಾಜು ಒಡೆದು ಹಾಕಿದ್ದಾನೆ. ಹೀಗಾಗಿ ಕಾರು ನಿಲ್ಲಿಸಿ ಹಿಂಬದಿಯ ಗಾಜು‌ ನೋಡಲು ಪೊಲೀಸರು ಹೋಗಿದ್ದಾರೆ. ಈ ವೇಳೆ, ಮುಂಭಾಗದಿಂದ ಗಸ್ತು ವಾಹನ ಏರಿದ ಮುನಿಯ ಅಲ್ಲಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

ಸತತ ಮೂರು ಗಂಟೆಗಳ ಕಾಲ ಪೊಲೀಸರು ಹುಡುಕಾಟ ನಡೆಸಿದರೂ 112 ವಾಹನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ನಂತರ ತುಮಕೂರು ತಾಲೂಕಿನ ಹೆಬ್ಬೂರು ಬಳಿ 112 ವಾಹನ ಪತ್ತೆಯಾಗಿದೆ. ಸಿಎಸ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪಡೆದ ಸಾಲಕ್ಕೆ ಕಮೀಷನ್​ ಪಡೆಯಲು ಸಿವಿಲ್​ ಕಾಂಟ್ರಾಕ್ಟರ್​ ಅಪಹರಣ; ಬೆಂಗಳೂರಲ್ಲಿ ನಾಲ್ವರ ಬಂಧನ

Last Updated : Nov 21, 2023, 3:30 PM IST

ABOUT THE AUTHOR

...view details