ತುಮಕೂರು:ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೋವಿನಕೆರೆ ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.
ಬೆಳಗ್ಗೆ ಈಜಲು ಹೋದವ ನೀರಲ್ಲಿ ಮುಳುಗಿ ಸಾವು.. ಸ್ನೇಹಿತರಿಗೂ ಬದುಕಿಸಲು ಆಗಲೇ ಇಲ್ಲ.. - drowned
ಬನ್ರೋ ಈಜೋಕೆ ಹೋಗೋಣ ಅಂತಾ ತನ್ನ ಸ್ನೇಹಿತರನ್ನ ಕರೆದುಕೊಂಡು ಬೆಳ್ಳಂಬೆಳಗ್ಗೆ ಈಜಲು ಕೆರೆಗೆ ಹೋಗಿದ್ದ. ಕೆರೆಯಲ್ಲಿ ಸ್ನೇಹಿತರೆಲ್ಲ ಈಜಿ ವಾಪಸ್ ಬಂದರೂ ಆತ ಮಾತ್ರ ನೀರಿನೊಳಗಿಂದ ಮೇಲೆದ್ದು ಬರಲೇ ಇಲ್ಲ.
ತೋವಿನಕೆರೆ ನಿವಾಸಿ ಚಂದ್ರು, ಮೃತ ಯುವಕ
ತೋವಿನಕೆರೆ ನಿವಾಸಿ ಚಂದ್ರು (25) ಮೃತ ಯುವಕ. ಈತ ಕಡಬ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತಿದ್ದ. ಇಂದು ಬೆಳಿಗ್ಗೆ ಮೂವರು ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ ಚಂದ್ರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.ಈ ಕುರಿತು ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.