ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, ಇಂದು 98 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 4 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.
ತುಮಕೂರು ತಾಲೂಕಿನಲ್ಲಿ 28, ಗುಬ್ಬಿ ತಾಲೂಕಿನಲ್ಲಿ 14, ಕುಣಿಗಲ್ ತಾಲೂಕಿನಲ್ಲಿ 17, ತುರುವೇಕೆರೆ ತಾಲೂಕಿನಲ್ಲಿ 13, ಪಾವಗಡ ತಾಲೂಕಿನಲ್ಲಿ 9, ಮಧುಗಿರಿ ತಾಲೂಕಿನಲ್ಲಿ 6, ಕೊರಟಗೆರೆ ತಾಲೂಕಿನಲ್ಲಿ 3, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 4, ಶಿರಾ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 3 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಪರಿಣಾಮ ಸೋಂಕಿತರ ಸಂಖ್ಯೆ 2509ಕ್ಕೆ ತಲುಪಿದೆ.