ಕರ್ನಾಟಕ

karnataka

ETV Bharat / state

ತುಮಕೂರು ಬಳಿ ಭೀಕರ ಅಪಘಾತ: 13 ಮಂದಿ ದಾರುಣ ಸಾವು - accident near Tumkur

ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಮಾರುತಿ ಬ್ರೆಜ್ಜಾ ಕಾರು​​ ಮತ್ತು ತವೆರಾ ​​ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

accident near Tumkur
ತುಮಕೂರು ಬಳಿ ಭೀಕರ ಅಪಘಾತ

By

Published : Mar 6, 2020, 7:19 AM IST

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬ್ಯಾಲದಕೆರೆ ಗ್ರಾಮದ ಬಳಿ ಮಾರುತಿ ಬ್ರೆಜ್ಜಾ ​ ಮತ್ತು ತವೆರಾ ಕಾರಿನ​​​ ನಡುವೆ ಡಿಕ್ಕಿ ಸಂಭಂವಿಸಿದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಮಾರುತಿ ಬ್ರೆಜ್ಜಾ ಕಾರಿನಲ್ಲಿದ್ದ ಲಕ್ಷ್ಮಿಕಾಂತ್, ಸಂದೀಪ್​​ , ಮಧು ಮೃತಪಟ್ಟಿದ್ದಾರೆ.

ಇನ್ನೂ ತವೆರಾ ಕಾರಿನಲ್ಲಿದ್ದ ತಮಿಳುನಾಡಿನ ಒಂದೇ ಕುಟುಂಬದ ಮಂಜುನಾಥ ಸುಂದರರಾಜ್, ಸರಳ , ರಾಜೇಂದ್ರ, ರತ್ನಮ್ಮ, ಗೌರಮ್ಮ, ತ್ರಿಶನ್ಯ, ತನುಜ, ಮಾಲಯಾಶ್ರಿ, ಚೇತನ ಎಂಬುವರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details