ಕರ್ನಾಟಕ

karnataka

ETV Bharat / state

ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢ

ಅಂತರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಪರ್ಕಕ್ಕೆ ಬಂದವರ ಶೋಧ ಕಾರ್ಯ ಮುಂದುವರೆದಿದೆ.

Two corona cases found in bagalakote
Two corona cases found in bagalakote

By

Published : Jun 21, 2020, 1:56 AM IST

ಬಾಗಲಕೋಟೆ: ಧಾರವಾಡದಿಂದ ಮತ್ತು ಹಾವೇರಿಯಿಂದ ಆಗಮಿಸಿದ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಲೂಕಿನ ಕಲಾದಗಿ ಗ್ರಾಮದ 25 ವರ್ಷದ ಯುವಕ ರೋಗಿ-8300 ಪುರುಷ, ಹುನಗುಂದ ತಾಲೂಕಿನ ಗುಡೂರ ಗ್ರಾಮದ 50 ವರ್ಷದ ರೋಗಿ -8301 ಮಹಿಳೆಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.

ರೋಗಿ -8300ರ ಹಿನ್ನೆಲೆ

ರೋಗಿ -8300 ಹಾವೇರಿಯ ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತರಬೇತಿಗೆ ಹಾಜರಾಗುವ ಹಿನ್ನೆಲೆ ಮುಂಜಾಗ್ರತವಾಗಿ ಸ್ಯಾಂಪಲ್ ನೀಡಿದ್ದರು. ಗ್ರಾಮಕ್ಕೆ ತೆರಳಿದಾಗ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೆ ಸೋಂಕಿತ ವ್ಯಕ್ತಿ ಕಳೆದ ಜೂನ್ 12 ರಂದು ಬಾಗಲಕೋಟೆಯಲ್ಲಿ ಮದುವೆಯಾಗಿದ್ದು, ಮದುವೆ ಸಮಾರಂಭಕ್ಕೆ ಆಗಮಿಸಿದವರನ್ನು ಪತ್ತೆ ಹಚ್ಚಲಾಗುತ್ತಿದೆ.

ಸದ್ಯ ಯುವಕ ವಾಸಿಸುವ ಪ್ರದೇಶ ಮತ್ತು ಮದುವೆ ನಡೆದ ಸ್ಥಳದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರೋಗಿ -8301 ಹಿನ್ನೆಲೆ

ರೋಗಿ -8301 ಸೋಂಕಿತ ಮಹಿಳೆಯು ಧಾರವಾಡದಲ್ಲಿ ಗಂಟಲು ಮಾದರಿ ನೀಡಿದ್ದರೂ ಸಹ ಗುಡೂರ ಗ್ರಾಮಕ್ಕೆ ಆಗಮಿಸಿದಾಗ ಸೋಂಕು ಇರುವುದು ದೃಡಪಟ್ಟಿದೆ. ಸದರಿ ಸೋಂಕಿತ ಮಹಿಳೆಯ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿ ವಾಸಿಸುವ ಪ್ರವೇಶವನ್ನು ಶೀಲ್‍ಡೌನ್ ಮಾಡಲಾಗಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯ ಕೋವಿಡ್ ವಿವರ...

ಒಟ್ಟು 280 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲಾ ಲ್ಯಾಬ್‍ನಲ್ಲಿ 32 ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲಾ ನೆಗಟಿವ್ ಬಂದಿವೆ. ಪ್ರತ್ಯೇಕವಾಗಿ 614 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ.

ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 10218 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 9765 ನೆಗಟಿವ್ ಪ್ರಕರಣ, 117 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ.

ಕೋವಿಡ್-19 ದಿಂದ ಒಟ್ಟು 94 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 20 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 16 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ.

ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 3433 ಜನರನ್ನು ಬಿಡುಗಡೆ ಮಾಡಲಾಗಿದೆ. ಶನಿವಾರ ಬೇರೆ ರಾಜ್ಯಗಳಿಂದ ಒಟ್ಟು 16 ಜನ ಜಿಲ್ಲೆಗೆ ಆಗಮಿಸಿದ್ದು, ಈ ಪೈಕಿ ಮಹಾರಾಷ್ಟ್ರದಿಂದ 7, ದೆಹಲಿಯಿಂದ 2, ಮದ್ಯಪ್ರದೇಶದಿಂದ ಒಬ್ಬರು, ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ತಲಾ 3 ಜನ ಆಗಮಿಸಿದ್ದಾರೆ. ಮಹಾರಾಷ್ಟ್ರ ಮತ್ತು ದೆಹಲಿಯಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್, ಉಳಿದ ರಾಜ್ಯದಿಂದ ಬಂದವರನ್ನ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details