ಹುಬ್ಬಳ್ಳಿ :ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೇ ಗೊಂದಲದಲ್ಲಿದೆ. ಮೈತ್ರಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದೇ ನಡೆಸುತ್ತಿರುವ ಆಡಳಿತಕ್ಕೆ ರಾಜ್ಯದ ಜನರು ಅಷ್ಟೇ ಅಲ್ಲ, ಆ ಎರಡೂ ಪಕ್ಷದ ಶಾಸಕರೂ ಬೇಸತ್ತು ಹೋಗಿದ್ದಾರೆ. ಇದು ಶಾಸಕರ ರಾಜೀನಾಮೆಗೆ ಕಾರಣವಾಗಿ ಮುಂದೆ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗುವುದು ಎಂದು ಅರವಿಂದ ಲಿಂಬಾವಳಿ ಹೇಳಿದರು.
ಮೈತ್ರಿ ಸರ್ಕಾರ ಗೊಂದಲದಲ್ಲಿದೆ- ಶಾಸಕ ಅರವಿಂದ ಲಿಂಬಾವಳಿ - ಅರವಿಂದ ಲಿಂಬಾವಳಿ
ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೇ ಗೊಂದಲದಲ್ಲಿದೆ. ಮೈತ್ರಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದೇ ನಡೆಸುತ್ತಿರುವ ಆಡಳಿತಕ್ಕೆ ರಾಜ್ಯದ ಜನರು ಅಷ್ಟೇ ಅಲ್ಲದೇ ಪಕ್ಷದ ಶಾಸಕರೂ ಬೇಸತ್ತು ಹೋಗಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಶಾಸಕರಲ್ಲಿಯೇ ಹೊಂದಾಣಿಕೆ ಇಲ್ಲ. ಅವರ ಆಡಳಿತ ಅವರಿಗೆ ಬೇಸತ್ತು ಹೋಗಿದ್ದು, ಇದಕ್ಕೆ ತಾಜಾ ಉದಾಹರಣೆ ಕುಪೇಂದ್ರ ರೆಡ್ಡಿ ಮಾತುಗಳು ಎಂದರು. ಬರುವ ದಿನಗಳಲ್ಲಿ ಶಾಸಕರ ರಾಜೀನಾಮೆಯಿಂದ ರಾಜ್ಯವು ಉಪ ಚುನಾವಣೆ ಎದುರಿಸಬೇಕಾಗುತ್ತದೆ. ಆಗ ಆಡಳಿತ ಪಕ್ಷಗಳ ಸಂಖ್ಯೆ 104ಕ್ಕಿಂತ ಕಡಿಮೆ ಬಂದಾಗ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗುತ್ತೆ ಎಂದರು.
ಈಗಾಗಲೇ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಮಗೆ ಬೆಂಬಲ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಮೈತ್ರಿ ಪಕ್ಷಗಳ ಶಾಸಕರೇ ರಾಜೀನಾಮೆ ಕೊಟ್ಟು ಹೊರ ಬರುತ್ತಾರೆ. ಬಿಜೆಪಿ ಮೈತ್ರಿ ಸರ್ಕಾರವನ್ನು ಬೀಳಿಸುವುದಿಲ್ಲ. ತಾನಾಗಿಯೇ ಬೀಳುತ್ತದೆ ಎಂದು ಭವಿಷ್ಯ ನುಡಿದರು.