ಶಿವಮೊಗ್ಗ:ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ನಡೆದಿದೆ. ಬೀರನಕೆರೆ ಗ್ರಾಮದ ರವಿ ನಾಯ್ಕ(18) ಮೃತ ಯುವಕ.
ರವಿನಾಯ್ಕ ಭಾನುವಾರ ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ಗ್ರಾಮದ ಎಂಪಿಎಂ ಕಟ್ಟೆಯ ಬಳಿ ಹೋದಾಗ, ಹಸು ನೀರಿಗೆ ಇಳಿದಿದೆ. ಈ ವೇಳೆ ಹಸು ನೀರಿನ ಆಳಕ್ಕೆ ಹೋದಾಗ ಹಸುವನ್ನು ಕರೆದುಕೊಂಡು ಬರಲು ಹೋಗಿ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.