ಕರ್ನಾಟಕ

karnataka

ETV Bharat / state

ರಸ್ತೆಯಲ್ಲಿ ಯಮನಾಗಿ ಬಂದ ಹಾವು: ನಾಲೆಗೆ ಕಾರು ಬಿದ್ದು ಮಹಿಳೆ ಸಾವು - ನಾಲೆಗೆ ಕಾರು ಬಿದ್ದು ಮಹಿಳೆ ಸಾವು

ತುಂಗಾ ಎಡದಂಡೆ ಕಾಲುವೆ ಬಳಿ ತೆರಳುತ್ತಿದ್ದ ವೇಳೆ ರಸ್ತೆಗೆ ಹಾವೊಂದು ಅಡ್ಡ ಬಂದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ.

ನಾಲೆಗೆ ಕಾರು ಬಿದ್ದು ಮಹಿಳೆ ಸಾವು
ನಾಲೆಗೆ ಕಾರು ಬಿದ್ದು ಮಹಿಳೆ ಸಾವು

By

Published : Feb 3, 2022, 12:10 PM IST

ಶಿವಮೊಗ್ಗ: ರಸ್ತೆಯಲ್ಲಿ ಅಡ್ಡ ಬಂದ ಹಾವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ನಾಲೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಗಾಜನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಸುಷ್ಮಾ ಮೃತ ಮಹಿಳೆ. ಸುಷ್ಮಾ ಪತಿ ಚೇತನ್ ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಚೇತನ ಅವರ ತಾಯಿ ತುಮಕೂರಿನಲ್ಲಿದ್ದು, ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ನೋಡಲು ಪತ್ನಿ ಸುಷ್ಮಾ ಜೊತೆ ಚೇತನ್​ ತಮ್ಮ ಇಂಡಿಕಾ ಕಾರಿನಲ್ಲಿ ಹೊರಟಿದ್ದಾರೆ. ನವೋದಯ ಶಾಲೆಯಿಂದ ಗಾಜನೂರು ಬಳಿ ಕೇವಲ ಎರಡು ಕಿ.ಮೀ ಸಾಗುವಷ್ಟರಲ್ಲಿ ತುಂಗಾ ಎಡದಂಡೆ ಕಾಲುವೆ ಬಳಿಯಲ್ಲಿ ರಸ್ತೆಗೆ ಹಾವೊಂದು ಅಡ್ಡ ಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಚೇತನ್ ಹಾವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ, ಕಾರು ಕಾಲುವೆಗೆ ಹೋಗಿದ್ದು, ಚೇತನ್ ಜೋರಾಗಿ ಕೂಗಿದ ಮೇಲೆ ಸ್ಥಳೀಯರು ಚಾಲಕನನ್ನು ಮೇಲಕ್ಕೆ ಎತ್ತಿದ್ದಾರೆ. ಸುಷ್ಮಾರನ್ನು ಮೇಲಕ್ಕೆ ಎತ್ತುವಷ್ಟರಲ್ಲಿಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details