ಕರ್ನಾಟಕ

karnataka

ETV Bharat / state

ಸಚಿವರ ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ: ಕೋಟಾ ಶ್ರೀನಿವಾಸ್ ಪೂಜಾರಿ - ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಸಚಿವರ ಖಾತೆ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಡಿ.ಎಸ್.ಶಂಕರಮೂರ್ತಿ ನಿವಾಸದಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು .

ಕೋಟಾ ಶ್ರೀನಿವಾಸ್ ಪೂಜಾರಿ

By

Published : Aug 25, 2019, 1:45 AM IST

ಶಿವಮೊಗ್ಗ:ಸಚಿವರ ಖಾತೆ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಡಿ.ಎಸ್.ಶಂಕರಮೂರ್ತಿ ನಿವಾಸದಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು .

ಅರುಣ್ ಜೇಟ್ಲಿ ಅವರ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಜೇಟ್ಲಿ ಅವರ ಸಾವು ನೋವು ತಂದಿದೆ. ಅವರು ಓರ್ವ ಆದರ್ಶ ರಾಜಕಾರಣಿ ಹಾಗೂ ಅದ್ಭುತ ಆರ್ಥಿಕ ತಜ್ಞರು ಸಹ ಆಗಿದ್ದರು. ರಕ್ಷಣಾ ಹಾಗೂ ಕಾನೂನು ಸಚಿವರಾಗಿಕೆಲಸ ನಿರ್ವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ನೋಟು ಅಮಾನೀಕರಣ, ಸಮಾನ ನಾಗರಿಕ ಸಂಹಿತೆ ವಿಚಾರ ಹಾಗೂ ಜಿಎಸ್​​ಟಿ ವಿಚಾರದಲ್ಲಿ ಅವರ ಆಳವಾದ ಅನುಭವ ಮತ್ತು ಅಪಾರ ಜ್ಞಾನದಿಂದ ನಮ್ಮ ಸರ್ಕಾರಕ್ಕೆ ಕೊಡುಗೆ ನೀಡಿದ್ದರು. ಅವರ ಸಾವಿನ ಸುದ್ದಿಯಿಂದ ನೋವುಂಟಾಗಿದೆ. ಪರಮಾತ್ಮ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.

ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ......

ಕೋಟಾ ಶ್ರೀನಿವಾಸ್ ಪೂಜಾರಿ
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎರಡು-ಮೂರು ದಿನಗಳಲ್ಲಿ ಜಲಪ್ರಳಯ ಉಂಟಾಯಿತು. ಅಂತೆಯೇ ಸಚಿವರು ಜಿಲ್ಲೆಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಬೇಕೆಂದು ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಆ ನಿಟ್ಟಿನಲ್ಲಿ ನಾನು ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಹೋಗಿದ್ದೆ ಎಂದರು.

ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಇವತ್ತು ನಾಳೆ ಆಗಬಹುದು ಎಂದು ತಿಳಿದಿದ್ದೆವು. ಆದರೆ ಜೇಟ್ಲಿ ಅವರ ಸಾವಿನ ನೋವಿನಿಂದ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರವಾಹ ಸೇರಿದಂತೆ ರಾಜ್ಯದ ಎಲ್ಲ ಸಮಸ್ಯೆಗಳನ್ನವ್ಯವಸ್ಥಿತವಾಗಿ ಬಗೆಹರಿಸುತ್ತದೆ. ಒಂದಾಗಿ ಸಮಸ್ಯೆ ಬಗೆಹರಿಸುತ್ತೇವೆ. ಸಮರ್ಥವಾದ ಸರ್ಕಾರ ಮುನ್ನಡೆಸುತ್ತೇವೆ ಎಂದು ತಿಳಿಸಿದರು.

ಎಲ್ಲ ಪಕ್ಷದಲ್ಲೂ ಎಷ್ಟೇ ಸ್ಪಷ್ಟ ಬಹುಮತ ಇದ್ದರೂ ಕೂಡ ಸಚಿವ ಸಂಪುಟದ ಆಕಾಂಕ್ಷಿಗಳ ನಡುವೆ ಕೆಲವು ಬೇಡಿಕೆಗಳು ಇರುತ್ತವೆ, ಅವು ನಮ್ಮಲ್ಲಿಯೂ ಇವೆ. ಅವೆಲ್ಲವನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತವೆ. ಹಾಲಾಡಿ ಹಾಗೂ ಅಂಗಾರ ಅವರು ನಮ್ಮ ಪಕ್ಷದಲ್ಲಿ ಐದಾರೂ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಕಾರ್ಯಕರ್ತರಲ್ಲಿ ನಿರಾಸೆ ಇರುತ್ತದೆ . ಅವರ ಸಹಕಾರ ನಮ್ಮ ಸರ್ಕಾರಕ್ಕೆ ಇದೆ ಎಂದರು.

ಇನ್ನು ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ನಿನ್ನೆ ಮೊನ್ನೆಯದಲ್ಲ ಮೊದಲಿನಿಂದಲೂ ಸಹ ಇತ್ತು ಅದು ಈಗ ಹೊರಬಿದ್ದಿದೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

ABOUT THE AUTHOR

...view details