ಶಿವಮೊಗ್ಗ :ಸರಿಯಾದ ಸಮಯಕ್ಕೆಮಳೆಯಾದ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯವಾದ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, 7,300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ಬಳಿಯ ತುಂಗಾ ಅಣೆಕಟ್ಟಿನ 21 ಕ್ರಸ್ಟ್ ಗೇಟ್ಗಳ ಮೂಲಕ ನೀರು ಹೊರಗಡೆ ಹರಿಸಲಾಗುತ್ತಿದೆ.
ಗಾಜನೂರು ಅಣೆಕಟ್ಟು ರಾಜ್ಯದ ಅತಿ ಚಿಕ್ಕ ಅಣೆಕಟ್ಟು ಎಂಬ ಖ್ಯಾತಿ ಹೊಂದಿದೆ. ಈ ಅಣೆಕಟ್ಟು 2.85 ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಸದ್ಯ, ಅಣೆಕಟ್ಟಿನ 21 ಕ್ರಸ್ಟ್ ಗೇಟ್ಗಳ ಮೂಲಕ 1,500 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಉಳಿದ 5,800 ಕ್ಯೂಸೆಕ್ ನೀರನ್ನು ಪವರ್ ಹೌಸ್ಗೆ ಬಿಡುಗಡೆ ಮಾಡಲಾಗಿದೆ.