ಶಿವಮೊಗ್ಗ:ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ಒಂದು ರೂ. ನಾಣ್ಯವನ್ನು ಸೇರಿಸಿ 12.500 ರೂ.ಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಬಂದು ಚುನಾವಣಾ ಶುಲ್ಕ ಕಟ್ಟುವ ಮೂಲಕ ಡಿಫರೇಟ್ ಆಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಚುನಾವಣಾ ಶುಲ್ಕವಾಗಿ ಒಂದು ರೂ. ನಾಣ್ಯಗಳನ್ನು ನೀಡಿದ ಪಕ್ಷೇತರ ಅಭ್ಯರ್ಥಿ! - ಶಿಕಾರಿಪುರ ವಿಧಾನಸಭಾ ಕ್ಷೇತ್ರ
ಮಲೆನಾಡಿನ ಸ್ಟೈಲ್ ನಲ್ಲಿ ತಲೆಗೆ ಅಡಿಕೆ ಟೋಪಿ, ಪಂಚೆ ತೊಟ್ಟು ಎತ್ತಿನಗಾಡಿಯ ಮೂಲಕ ಆಗಮಿಸಿ, ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ನಾಮಪತ್ರ ಸಲ್ಲಿಕೆ.
ವಿನಯ್ ನಾಮಪತ್ರ ಸಲ್ಲಿಕೆಯ ವೇಳೆ ಮಲೆನಾಡಿನ ಸ್ಟೈಲ್ನಲ್ಲಿ ತಲೆಗೆ ಅಡಿಕೆ ಟೋಪಿ, ಪಂಚೆ ತೊಟ್ಟು ಎತ್ತಿನಗಾಡಿಯ ಮೂಲಕ ಆಗಮಿಸಿದರು. ವಿನಯ್ ರಾಜಾವತ್ ನಾಮಪತ್ರ ಸಲ್ಲಿಕೆಯ ವೇಳೆ ಇಬ್ಬರು ಅಂಧರ ಜೊತೆ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯ ಸ್ಪರ್ಧೆಗಾಗಿ ಕಟ್ಟುಲು ಒಂದೂಂದು ರೂಪಾಯಿಗಳನ್ನು ಸೇರಿಸಿ 12.500 ರೂ.ಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಬಂದು ಚುನಾವಣಾ ಶುಲ್ಕ ಕಟ್ಟಿದ್ದು ವಿಶೆಷವಾಗಿತ್ತು.
ವಿನಯ್ ರಾಜಾವತ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪನವರ ಎದುರು ಸಹ ಸ್ಪರ್ಧೆ ಮಾಡಿದ್ದರು. ಈ ವೇಳೆ ಹೆಲಿಕಾಪ್ಟರ್ನಲ್ಲಿ ಬಂದು ನಾಮಪತ್ರ ಸಲ್ಲಿಸಿ ರಾಜ್ಯಾದ್ಯಾಂತ ಸುದ್ದಿಯಾಗಿದ್ದರು. ತಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳುತ್ತಾ ಕೇವಲ 400 ಮತಗಳನ್ನು ಗಳಿಸಿದ್ದರು. ಈಗ ಮತ್ತೆ ಭ್ರಷ್ಟಾಚಾರ ತೊಲಗಿಸಲು ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವುದಾಗಿ ವಿನಯ್ ತಿಳಿಸಿದ್ದಾರೆ.