ಕರ್ನಾಟಕ

karnataka

By

Published : Mar 8, 2022, 5:29 PM IST

ETV Bharat / state

ವರದಾ ಮೂಲದ ಅಗಸ್ತ್ಯ ತೀರ್ಥ ಹೂಳೆತ್ತುವ ಕಾರ್ಯ ಪ್ರಾರಂಭ: ಇನ್ನೊಂದೆಡೆ ಕೆರೆ ಉಳಿಸಿ ಅಭಿಯಾನ

ಪವಿತ್ರ ಕ್ಷೇತ್ರವಾದ ಅಗಸ್ತ್ಯ ತೀರ್ಥ ಇಂದು ಮಲಿನವಾಗಿ ಮೂಲವೇ ಕಾಣೆಯಾಗುವ ಸ್ಥಿತಿ ತಲುಪಿದೆ. ಇದರಿಂದ ಮೂಲದಲ್ಲಿನ ಹೂಳು ತೆಗೆದು ನೀರು ಸರಿಯಾಗಿ ಹರಿಯುವಂತೆ ಮಾಡಲು ಈಗ ಸ್ವಾನ್ ಅಂಡ್ ಮ್ಯಾನ್ ಸಂಸ್ಥೆಯು ಪವಿತ್ರ ತೀರ್ಥವನ್ನು ಪುನಶ್ಚೇತನಗೊಳಿಸಲು ಮುಂದಾಗಿದೆ.

Varadamula's Agastya Tirtha Dredging work start
ವರದ ಮೂಲದ ಅಗಸ್ತ್ಯ ತೀರ್ಥ ಹೂಳೆತ್ತುವ ಕಾರ್ಯ ಪ್ರಾರಂಭ

ಶಿವಮೊಗ್ಗ: ಪುರಾಣ ಪ್ರಸಿದ್ಧವಾದ ಸಾಗರ ತಾಲೂಕಿನ ವರದಮೂಲದ ಅಗಸ್ತ್ಯ ತೀರ್ಥವನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಅದರ ಹೂಳೆತ್ತುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ವರದಾ ನದಿಯು ಸಾಗರ ತಾಲೂಕಿನಲ್ಲಿ ಹುಟ್ಟುವ ಏಕೈಕ ನದಿಯಾಗಿದೆ. ಇದು ಪುರಾಣ ಪ್ರಸಿದ್ಧ ಕ್ಷೇತ್ರ ಸಹ ಆಗಿದೆ. ಪುರಾಣದ ಪ್ರಕಾರ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ಚಿವುಟಿ ತೆಗೆದ ಪರಿಣಾಮವಾಗಿ ಈಶ್ವರನಿಗೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ. ಈ ದೋಷ ನಿವಾರಣೆಗೆ ವಿಷ್ಣು ತನ್ನ ಪಂಚಜನ್ಯ ಎಂಬ ಶಂಖದಿಂದ ಗಂಗಾ ಜಲವನ್ನು ಪ್ರೋಕ್ಷಣೆ ಮಾಡಿದ ನಂತರ ಈಶ್ವರನಿಗೆ ಬ್ರಹ್ಮಹತ್ಯ ದೋಷ ಹೋಗುತ್ತದೆ. ಪಾಂಚಜನ್ಯದಿಂದ ನಲಕ್ಕೆ ಬಿದ್ದ ಗಂಗಾಜಲಕ್ಕೆ ದೇವತೆಗಳು ವರ ನೀಡುತ್ತಾರೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಹೋಗುತ್ತದೆ ಎಂಬ ನಂಬಿಕೆ ಇದೆ. ನಂತರ ಅಗಸ್ತ್ಯರು ಸಹ ಇಲ್ಲಿ ಬಂದು ತಪಸ್ಸು ಮಾಡಿದ್ದರು ಎಂದು ಪುರಾಣ ತಿಳಿಸುತ್ತದೆ.


ಇಂತಹ ಪವಿತ್ರ ಕ್ಷೇತ್ರ ಇಂದು ಮಲೀನವಾಗಿ ಮೂಲವೇ ಕಾಣೆಯಾಗುವ ಸ್ಥಿತಿ ತಲುಪಿದೆ. ಇದರಿಂದ ಮೂಲದಲ್ಲಿನ ಹೂಳನ್ನು ತೆಗೆದು, ನೀರು ಸರಿಯಾಗಿ ಹರಿಯುವಂತೆ ಮಾಡಲು ಈಗ ಸ್ವಾನ್ ಅಂಡ್ ಮ್ಯಾನ್ ಸಂಸ್ಥೆಯು ಪವಿತ್ರ ತೀರ್ಥವನ್ನು ಪುನಶ್ಚೇತನಗೊಳಿಸಲು ಮುಂದಾಗಿದೆ. ವರದಾ ಮೂಲ ಪುನಶ್ವೇತನ ಕಾರ್ಯಕ್ರಮಕ್ಕೆ ಸಾಗರ ಉಪವಿಭಾಗಧಿಕಾರಿ ಡಾ‌. ನಾಗರಾಜ ಅವರು ಚಾಲನೆ ನೀಡಿದರು. ಸ್ಯಾನ್ ಅಂಡ್ ಮ್ಯಾನ್ ಸಂಸ್ಥೆಯ ಟಿ.ವಿ. ಪಾಂಡುರಂಗ ಅವರು ಮೂಲದ ಪುನಶ್ಚೇತನಕ್ಕೆ 26 ಲಕ್ಷ ರೂ. ಯೋಜನೆ ಹಾಕಿದ್ದಾರೆ. ಇದಕ್ಕೆ ಕರ್ಣಾಟಕ ಬ್ಯಾಂಕ್ 6 ಲಕ್ಷ ರೂ. ನೀಡಿದೆ. 3 ಲಕ್ಷ ರೂ.ಗಳನ್ನು ವರದಾ ಮೂಲದ ಗ್ರಾಮಸ್ಥರು ನೀಡುತ್ತಿದ್ದಾರೆ. ಉಳಿದ 16 ಲಕ್ಷ ರೂಗಳನ್ನು ದಾನಿಗಳಿಂದ ನೀರಿಕ್ಷಿಸಲಾಗಿದೆ.

ಕೆರೆ ಉಳಿಸಿ ಅಭಿಯಾನ:ಹೊಸನಗರ ತಾಲೂಕು ಅರಸಾಳು ಗ್ರಾಮ ವ್ಯಾಪ್ತಿಯ ತಮ್ಮಡಿಕೊಪ್ಪದಲ್ಲಿ ಸುಮಾರು 125 ಮೀಟರ್ ಉದ್ದದ 40 ಅಡಿ ಅಗಲದ ಕೆರೆಯನ್ನು ಭೂ ದಾಹಿಗಳು ಕಬಳಿಕೆ ಮಾಡಿ ಕೊಂಡಿದ್ದಾರೆ. ಇದು ಗ್ರಾಮದ ಸರ್ವೆ ನಂಬರ್ 12 ರಲ್ಲಿ ಇದೆ. ಈ ಕೆರೆಯನ್ನು ಗುಡ್ಡದ ತೋಟದ ಕೆರೆ ಎಂದು ಕರೆಯುತ್ತಾರೆ. ಈ ಕೆರೆಗೆ ಕೊಡಿ, ನಾಲೆ, ಕೆರೆ ತೋಬು ಎಲ್ಲವನ್ನೂ ಸರ್ಕಾರವೇ ನಿರ್ಮಿಸಿದೆ. ಇದು ಗುಡ್ಡದ ಕೆಳಗೆ ಇರುವುದರಿಂದ ಗುಡ್ಡದ ಎಲ್ಲಾ ನೀರು ಇಲ್ಲಿ ಬಂದು ಶೇಖರಣೆಯಾಗಿ ಕೆರೆ ನಿರ್ಮಾಣವಾಗಿತ್ತು. ಈ ಕೆರೆ ನೀರಿನಿಂದ ಕೊಳವೆ ಬಾವಿ, ಕೃಷಿಹೊಂಡ, ತೋಟಗಳಿಗೆ ನೀರು ಹೋಗುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಕೆರೆ ಪಕ್ಕದ ಜಮೀನಿನವರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಕೆರೆಯಲ್ಲಿ ನೀರು ನಿಲ್ಲದಂತೆ ಮಾಡಿದ್ದಾರೆ. ಇದರಿಂದ ಕೆರೆಯಾಶ್ರಿತ ನೂರಾರು ರೈತರಿಗೆ ನೀರು ಇಲ್ಲದೆ ಕೃಷಿ ಮಾಡುವುದೇ ದುಸ್ಥರವಾಗಿದೆ.

ಇದನ್ನೂ ಓದಿ:ಬಾಗಲಕೋಟೆಯಲ್ಲಿ 'ಹಾಲು ಕುಡಿಯುವ ಕಲ್ಲಿನ ಬಸವ'! ಹುಲಿಕಲ್ ನಟರಾಜ್ ಹೇಳಿದ್ದೇನು?

ಕೆರೆ ಒತ್ತುವರಿ ಕುರಿತು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರಿಗೆ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಜಿಲ್ಲೆಯ ಪರಿಸರ ಪ್ರೇಮಿಗಳು ಗ್ರಾಮಕ್ಕೆ ಭೇಟಿ ನೀಡಿ, ಕೆರೆ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ಕೆರೆಯನ್ನು ಸಂಬಂಧಪಟ್ಟ ಇಲಾಖೆಯವರು ಉಳಿಸದೆ ಹೋದ್ರೆ ಉಗ್ರ ಹೋರಾಟ ಮಾಡುವುದಾಗಿ ಪರಿಸರ ಪ್ರೇಮಿಗಳಾದ ಕುಮಾರಸ್ವಾಮಿ, ಬಾಲು ಹೆಗಡೆ, ಅಖಿಲೇಷ್ ಚಿಪ್ಲಿ, ಚಿತ್ರನಟ ಏಸುಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details