ಶಿವಮೊಗ್ಗ:ಬಾರ್ ಹೊರಗೆ ಕುಡಿದು ನಿಂತಿದ್ದ ಗೆಳೆಯರಿಬ್ಬರಿಗೆ ಚಾಕು ಇರಿತವಾಗಿರುವ ಘಟನೆ ಜಿಲ್ಲೆಯ ಎನ್.ಟಿ. ರಸ್ತೆ ಸುಂದರ ಆಶ್ರಯ ಬಾರ್ ಬಳಿ ನಡೆದಿದೆ.
ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಸುಂದರ ಆಶ್ರಯ ಬಾರ್ ಪಕ್ಕದ ಶ್ರೀನಿವಾಸ ದೇವಾಲಯದ ಬಳಿ ಗೆಳಯರಾದ ಜೀವನ್ ಹಾಗೂ ಕೇಶವ್ ಶೆಟ್ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಬಂದ ನಾಲ್ಕೈದು ಜನ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಓದಿ:ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ದರೋಡೆಕೋರರು: ಜೈಲಿಗಟ್ಟಿದ ಪೊಲೀಸರು
ಇದರಲ್ಲಿ ಜೀವನ್ (27) ಮೃತಪಟ್ಟಿದ್ದು, ಕೇಶವ್ ಸೇಠ್ (28) ಸ್ಥಿತಿ ಗಂಭೀರವಾಗಿದೆ. ಜೀವನ್ ಡ್ಯಾನ್ಸ್ ಮಾಸ್ಟರ್ ವೃತ್ತಿ ನಡೆಸುತ್ತಿದ್ದರು. ಕೇಶವ್ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮೇಲಿನ ಚಾಕು ಇರಿತಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರದ್ಯಾಂತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.