ಶಿವಮೊಗ್ಗ: ದನ ಹುಡುಕಲು ಹೋಗಿದ್ದ ಬಾಲಕರಿಬ್ಬರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆ ಹೊಸನಗರದ ಮಂಡಾನಿ ಕೋಟೆಕಾನು ಗ್ರಾಮದಲ್ಲಿ ನಡೆದಿದೆ.
ಹೊಂಡದಲ್ಲಿ ಬಿದ್ದು ಬಾಲಕರಿಬ್ಬರ ದುರ್ಮರಣ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - ಬಾಲಕರಿಬ್ಬರು ದುರ್ಮರಣ
ಸಹೋದರರಿಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಬಾಲಕರನ್ನು ಹುಡುಕಿಕೊಂಡು ಹೋದಾಗ ಕೃಷಿ ಹೊಂಡದಲ್ಲಿ ಬಿದ್ದಿದ್ದು ಕಂಡುಬಂದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಬಾಲಕರು
ನವೀನ್ (12) ಹಾಗೂ ಸೃಜನ್(9) ಮೃತ ಬಾಲಕರು. ಗಿರಿಜಾ ಹಾಗೂ ಗಿರೀಶ್ ದಂಪತಿಯ ಪುತ್ರರಾದ ಮೃತ ಬಾಲಕರರು ಮಧ್ಯಾಹ್ನ ಊಟ ಮಾಡಿ ದನ ಹುಡುಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು.
ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದಿರುವುದರಿಂದ ತಂದೆ ಗಿರೀಶ್ ಅವರನ್ನು ಹುಡುಕಿಕೊಂಡು ಹೋದಾಗ ಬಾಲಕರಿಬ್ಬರು ಕೃಷಿ ಹೊಂಡದಲ್ಲಿ ಬಿದ್ದಿದ್ದು ಕಂಡು ಬಂದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಅಳಲು ಮುಗಿಲು ಮುಟ್ಟಿದೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.