ಕರ್ನಾಟಕ

karnataka

ETV Bharat / state

ಮಾಸ್ಕ್ ಹಾಕದಿದ್ದಕ್ಕೆ ದಂಡ : ಪೊಲೀಸನ​ ಬೈಕ್ ಕದ್ದ ಕಳ್ಳರು - Thieves stole a policeman bike in Shivamogga

ಮಾಸ್ಕ್ ಹಾಕದಿದ್ದಕ್ಕೆ ದಂಡ ಕೇಳಿದ ಪೊಲೀಸಪ್ಪನ ಬೈಕ್ ಅನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ಹೋಗಲು ಬಂದಾಗ ಪೊಲೀಸನ ಬೈಕ್ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ದೂರು‌ ದಾಖಲಾಗಿದೆ.

Thieves stole a policeman bike in Shivamogga news
ಪೊಲೀಸನ​ ಬೈಕ್ ಕದ್ದ ಕಳ್ಳರು

By

Published : Sep 26, 2020, 5:52 PM IST

ಶಿವಮೊಗ್ಗ: ಮಾಸ್ಕ್ ಹಾಕದಿದ್ದಕ್ಕೆ ದಂಡ ಕೇಳಿದ ಪೊಲೀಸನ ಬೈಕ್ ಅನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಹೊಸನಗರದಲ್ಲಿ ನಡೆದಿದೆ.

ಹೊಸನಗರ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕುತ್ತಿದ್ದರು. ಈ ವೇಳೆ, ಬೈಕ್​ನಲ್ಲಿ ಬಂದ ಇಬ್ಬರು ಮಾಸ್ಕ್ ಹಾಕದೇ ಇರುವ ಬಗ್ಗೆ ಪೊಲೀಸರು ಪ್ರಶ್ನಿಸಿ, ದಂಡ ಕಟ್ಟುವಂತೆ ಹೇಳಿದ್ದಾರೆ. ಆದರೆ, ಇವರ ಬಳಿ ದಂಡ ಕಟ್ಟಲು ಹಣ ಇರದೇ ಹೋದಾಗ ಪೊಲೀಸರು ಬೈಕ್ ನಲ್ಲಿದ್ದವರನ್ನು ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ. ಬಳಿಕ ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದಾರೆ.

ಪೊಲೀಸ್ ಠಾಣೆಯಿಂದ ಹೊರ ಬಂದ ಕಳ್ಳರು, ಠಾಣೆ ಮುಂಭಾಗದ ಅಂಗಡಿಗೆ ಹೋಗಿ ನಮ್ಮ ಬೈಕ್ ಕೀ‌ ಕಳೆದು ಹೋಗಿದೆ ನಿಮ್ಮ ಬೈಕ್ ಕೀ‌ ನೀಡಿ ಬೈಕ್ ಸ್ಟಾರ್ಟ್ ಮಾಡಿ ವಾಪಸ್ ನೀಡುತ್ತೇವೆ ಎಂದು ಕೀ ಪಡೆದು ಪೊಲೀಸರ ಬೈಕ್‌ ಸ್ಟಾರ್ಟ್ ಮಾಡಿ‌ಕೊಂಡು ಪರಾರಿಯಾಗಿದ್ದಾರೆ.

ಕರ್ತವ್ಯ ಮುಗಿಸಿ ಮನೆಗೆ ಹೋಗಲು ಬಂದಾಗ ಪೊಲೀಸನ ಬೈಕ್ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾಗಿದೆ.

ABOUT THE AUTHOR

...view details