ಶಿವಮೊಗ್ಗ:ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕಳೆದ ಸೋಮವಾರ(ಜುಲೈ 10) ಮಚ್ಚು ಬೀಸಿದ ಪ್ರಕರಣದಲ್ಲಿ ಚೋರ್ ಸಮೀರ್ ಸೇರಿ ಆರು ಮಂದಿಯನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಸೋಮವಾರ ಜೀವಿತ್, ಅಪ್ರೋಜ್, ಸಾದೀಕ್ ಮತ್ತು ರಾಘವೇಂದ್ರ ಅವರ ಸ್ನೇಹಿತ ವಿಷ ಸೇವನೆ ಮಾಡಿದ್ದ. ಆತನನ್ನು ತೀರ್ಥಹಳ್ಳಿಯ ಜಯ ಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ನಾಲ್ವರು ಆಸ್ಪತ್ರೆ ರಸ್ತೆಯಲ್ಲಿಯೇ ಇರುವ ಬಾರ್ಗೆ ಕುಡಿಯಲು ಹೋಗಿದ್ದರು. ಈ ವೇಳೆ, ಅದೇ ಬಾರ್ಗೆ ಚೋರ್ ಸಮೀರ್ ತನ್ನ ಸ್ನೇಹಿತರೊಂದಿಗೆ ಬಂದಿದ್ದನು. ಕುಡಿದ ಮತ್ತಿನಲ್ಲಿ ಅಪ್ರೋಜ್ಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದ.
ಇದರಿಂದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಎಲ್ಲರನ್ನು ಚದುರಿಸಿದ್ದರು. ಸಂಜೆ ವೇಳೆ ಅಪ್ರೋಜ್ ಮತ್ತು ಗೆಳೆಯರು ತೀರ್ಥಹಳ್ಳಿಯ ಆಗುಂಬೆ ಸರ್ಕಲ್ ಬಳಿಯ ಬಾರ್ಗೆ ಕುಡಿಯಲು ಹೋದಾಗ ಅಲ್ಲಿಂದ ಅಪ್ರೋಜ್, ಚೋರ್ ಸಮೀರ್ಗೆ ಪೋನ್ ಮಾಡಿ ನನಗೆ ಮಧ್ಯಾಹ್ನ ಯಾಕೆ ನನಗೆ ಬೈದೆ ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಪೋನ್ ನಲ್ಲಿಯೇ ಬೈದಾಡುಕೊಳ್ಳುತ್ತಾರೆ. ಚೋರ್ ಸಮೀರ್ ನೀನು ಎಲ್ಲಿದ್ದಿಯಾ ಎಂದ ಅಪ್ರೋಜ್ನನ್ನು ಕೇಳುತ್ತಾನೆ. ನಾನು ಆಗುಂಬೆ ವೃತ್ತದ ಬಾರರ್ನಲ್ಲಿ ಇದ್ದೇನೆ ಎಂದಾಗ ಚೋರ್ ಸಮೀರ್ ಅದೇ ಸರ್ಕಲ್ಗೆ ಬರುತ್ತಾನೆ. ಆಗ ಮತ್ತೆ ಚೋರ್ ಸಮೀರ್ ಹಾಗೂ ಅಪ್ರೋಜ್ ನಡುವೆ ಗಲಾಟೆ ಆಗುತ್ತದೆ. ಆಗ ಪೊಲೀಸರು ಮಧ್ಯ ಪ್ರವೇಶ ಮಾಡಿ ಎಲ್ಲರನ್ನು ಅಲ್ಲಿಂದ ಓಡಿಸುತ್ತಾರೆ.
ಅಲ್ಲಿಂದ ತೆರಳಿದ ಅಪ್ರೋಜ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪುನಃ ವಾಪಸ್ ಬಂದು ಸಮೀರ್ ಅಪ್ರೋಜ್ ಮೇಲೆ ಮಚ್ಚು ಬೀಸುತ್ತಾನೆ. ಇದರಿಂದ ಅಪ್ರೋಜ್ ತಲೆಗೆ ಗಾಯವಾಗುತ್ತದೆ. ಜೊತೆಗೆ ಜೀವಿತ್ಗೆ ಗಾಯವಾಗುತ್ತದೆ. ಈ ದೃಶ್ಯವು ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿರುತ್ತದೆ. ಗಾಯಗೊಂಡ ಅಪ್ರೋಜ್ ಹಾಗೂ ಜೀವಿತ್ ಅವರು ನೀಡಿದ ದೂರಿನ ಮೇರೆಗೆ ಚೋರ್ ಸಮೀರ್ ಹಾಗೂ ಸಫನ್ ಹಾಗೂ ಇತರ ನಾಲ್ವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.