ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲದ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಳ್ಳಬೇಕು: ಡಿ.ಕೆ.ಶಿವಕುಮಾರ್ - ಈಟಿವಿ ಭಾರತ ಕನ್ನಡ

ತೆಲಂಗಾಣದಲ್ಲಿ ಬಿಜೆಪಿ ಆಪರೇಷನ್​ ಕಮಲ ಮಾಡಲು ಹೋಗಿ ಸಿಕ್ಕಿಬಿದ್ದಿದೆ. ದೇಶದೆಲ್ಲೆಡೆ ಆಪರೇಷನ್​ ಕಮಲ ನಡೆಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್​ ಸ್ವಯಂದೂರು ದಾಖಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಒತ್ತಾಯಿಸಿದ್ದಾರೆ.

the-supreme-court-should-file-a-suo-moto-case-on-operation-kamala
ಆಪರೇಷನ್ ಕಮಲದ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಳ್ಳಬೇಕು: ಡಿ.ಕೆ.ಶಿವಕುಮಾರ್

By

Published : Oct 29, 2022, 3:18 PM IST

Updated : Oct 29, 2022, 4:02 PM IST

ಶಿವಮೊಗ್ಗ: ದೇಶದೆಲ್ಲೆಡೆ ಆಪರೇಷನ್ ಕಮಲ ನಡೆಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

ದೇಶದೆಲ್ಲೆಡೆ ಆಪರೇಷನ್ ಕಮಲ : ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ತೆಲಂಗಾಣ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ಕೆಲವರು ಸಿಕ್ಕಿಬಿದ್ದಿದ್ದಾರೆ. ಇದೇ ರೀತಿ ದೇಶಾದ್ಯಂತ ಬಿಜೆಪಿಯವರು ಆಪರೇಷನ್​ ಕಮಲ ನಡೆಸಿಕೊಂಡು ಬರುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ರಾಜ್ಯದಲ್ಲಿಯೂ ಆಪರೇಷನ್ ಕಮಲದ ಮೂಲಕವೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.

ನವೆಂಬರ್ 6 ರಂದು ಎಐಸಿಸಿ ಅಧ್ಯಕ್ಷ ಖರ್ಗೆ ರಾಜ್ಯಕ್ಕೆ ಆಗಮನ: ಸುಮಾರು ಐವತ್ತು ವರ್ಷಗಳ ನಂತರ ಕರ್ನಾಟಕದವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ನವೆಂಬರ್ 6 ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ಇದಕ್ಕಾಗಿ ನಾನು ನಾಳೆ ಪೂರ್ವಭಾವಿ ಸಭೆ ಕರೆದಿದ್ದೇನೆ. ಖರ್ಗೆಯವರ ಸನ್ಮಾನದ ಕಾರ್ಯಕ್ರಮದ ರೂಪುರೇಷೆ, ಕಾರ್ಯಕ್ರಮ ಎಲ್ಲಿ ನಡೆಸಬೇಕೆಂದು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಆಪರೇಷನ್ ಕಮಲದ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಳ್ಳಬೇಕು: ಡಿ.ಕೆ.ಶಿವಕುಮಾರ್

ರಾಜ್ಯದ ಕಾಂಗ್ರೆಸ್ ನ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರು, ಚುನಾವಣೆಗೆ ಸ್ಪರ್ಧೆ ಮಾಡುವವರು ಸೇರಿದಂತೆ ಎಲ್ಲರೂ ಬಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಬೇಕೆಂದು ನಿಮ್ಮ ಮೂಲಕ ಕರೆ ನೀಡುತ್ತಿದ್ದೇನೆ ಎಂದರು.

ಶಿವಮೊಗ್ಗದಲ್ಲಿ ಈಶ್ವರಪ್ಪನವರಿಂದಲೇ ಗಲಾಟೆ : ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅರಿಂದಲೇ ಗಲಾಟೆ ನಡೆಯುತ್ತಿದೆ. ಇದರಿಂದ ಇಲ್ಲಿ ಯಾರು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಈಶ್ವರಪ್ಪ ಅವರಿಗೆ ತಾಕತ್ ಇದ್ರೆ ಹೂಡಿಕೆದಾರರನ್ನು ರಾಜ್ಯಕ್ಕೆ ಕರೆದುಕೊಂಡು ಬರಲಿ ಎಂದು ಡಿಕೆಶಿ ಸವಾಲೆಸೆದರು.

ನಮ್ಮದು ಮನೆಯೊಂದು ಮೂರು ಬಾಗಿಲು ಎನ್ನುವ ಬಿಜೆಪಿ ಮನೆಯಲ್ಲಿ 12 ಬಾಗಿಲು ಆಗಿದೆ. ಮೊದಲು ಅದನ್ನು ಅರ್ಥ ಮಾಡಿಕೊಳ್ಳಲಿ. ರಾಜ್ಯದಲ್ಲಿ ಇರುವುದು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ಎಂದರು.

ಇದನ್ನೂ ಓದಿ :ಮೀಸಲಾತಿ ನೀಡಬೇಕೆಂದರೆ ಕುಲಶಾಸ್ತ್ರ ಅಧ್ಯಯನ ಆಗಬೇಕು: ಶ್ರೀರಾಮುಲು

Last Updated : Oct 29, 2022, 4:02 PM IST

ABOUT THE AUTHOR

...view details