ಕರ್ನಾಟಕ

karnataka

ETV Bharat / state

ಅಂಬಾರಿ ಹೊರುವ ಆನೆಯ ಆರೋಗ್ಯದಲ್ಲಿ ಏರುಪೇರು: ಶಿವಮೊಗ್ಗ ಅಂಬಾರಿ ಮೆರವಣಿಗೆ ಡೌಟ್​

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಸಾಗರ ಎಂಬ ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದರಿಂದ ಸಾಗರ ಅಂಬಾರಿ ಹೊರುವ ಬಗ್ಗೆ ಅನುಮಾನ ಮೂಡಿದೆ.

ಸಾಗರ್ ಆನೆ

By

Published : Oct 8, 2019, 4:30 PM IST

ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಸಾಗರ ಎಂಬ ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದರಿಂದ ಸಾಗರ ಅಂಬಾರಿ ಹೊರುವ ಬಗ್ಗೆ ಅನುಮಾನ ಮೂಡಿದೆ.

ಸಾಗರ ಆನೆ
ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಸಾಗರ ಪ್ರತಿ ವರ್ಷ ತಾಯಿ ಚಾಮುಂಡಿಯನ್ನು ಹೊರುವ ಕೆಲಸ ಮಾಡುತ್ತಿದ್ದ. ಕಳೆದ ಬಾರಿ ಅಂಬಾರಿ ಹೊತ್ತಿದ್ದ ಸಾಗರ ಮೆರವಣಿಗೆಯ ಕೊನೆಯಲ್ಲಿ ಅಂಬಾರಿ ಹೊರಲು ಸಾಧ್ಯವಾಗದೆ ಕುಸಿದು ಕುಳಿತಿದ್ದ. ಇದರಿಂದ ತಕ್ಷಣ ಅಂಬಾರಿಯನ್ನು ಕೆಳಗೆ ಇಳಿಸಿ, ಮಹಾನಗರ ಪಾಲಿಕೆಯ ವಾಹನದಲ್ಲಿ ಅಂಬಾರಿಯನ್ನು ಬನ್ನಿ ಮಂಟಪಕ್ಕೆ ಕಳುಹಿಸಲಾಗಿತ್ತು.

ಈ ಬಾರಿ ಸಾಗರ ಜೊತೆ ಭಾನುಮತಿ ಹಾಗೂ ಗಂಗೆ ಎಂಬ ಎರಡು ಹೆಣ್ಣಾನೆಗಳನ್ನು ಸಹ ಕರೆತರಲಾಗಿದೆ. ಈ ಆನೆಗಳಿಗೆ ಕಳೆದ ನಾಲ್ಕೈದು ದಿನಗಳಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಂಚಾರ ಮಾಡಿಸಲಾಗುತ್ತಿತ್ತು. ಇಂದು ಬೆಳಗ್ಗೆ ಸಾಗರ ಆನೆ ಮೈಮೇಲೆ ಚಿತ್ರ ಬಿಡಿಸುವ ವೇಳೆ ಚನ್ನಾಗಿಯೇ ಇತ್ತು. ಬಳಿಕ ಎರಡು ಬಾರಿ ಭೇದಿಯಾಗಿದೆ. ತಕ್ಷಣ ಎಚ್ಚೆತ್ತ ಅರಣ್ಯಾಧಿಕಾರಿಗಳು ಹಾಗೂ ವೈದ್ಯ ವಿನಯ್ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆನೆಗೆ ಗ್ಲೂಕೋಸ್ ನೀಡಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೆ ಮಾತ್ರ ಸಾಗರ ಮೆರವಣಿಗೆಯಲ್ಲಿ ಭಾಗವಹಿಸಲಿದೆ ಎನ್ನಲಾಗುತ್ತಿದೆ.

ABOUT THE AUTHOR

...view details