ಶಿವಮೊಗ್ಗ : ರಾಜ್ಯಾದ್ಯಂತ ಕೇಸರಿ, ಹಿಜಾಬ್ ವಿವಾದ ತಾರಕಕ್ಕೇರಿದೆ. ಆದರೆ, ಇಂದು ಶಿವಮೊಗ್ಗದಲ್ಲಿ ಎರಡು ಕೋಮಿನ ನಡುವೆ ಕಲ್ಲು ತೂರಾಟವಾಗಿದೆ. ಹಾಗಾಗಿ, ಪೊಲೀಸರು ಲಾಠಿಚಾರ್ಜ್ ಸಹ ಮಾಡಿದ್ದಾರೆ. ಇದರ ನಡುವೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಕಾಲೇಜಿಗೆ ಬರುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.
ತಿರಂಗಾ ಹಿಡಿದು ತಾವೆಲ್ಲ ಒಂದೇ ಎಂದು ಕಾಲೇಜಿಗೆ ಬಂದರು.. ಉನ್ಮಾದ ದ್ವೇಷವಲ್ಲವಿದು, ವಿದ್ಯಾರ್ಥಿಗಳ ದೇಶ ಭಕ್ತಿ.. - ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಕೇಲ ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಿಡಿದು ಕಾಲೇಜಿಗೆ ಬರುವ ಮೂಲಕ ನಾವೇಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಕಾಲೇಜಿನ ಕ್ಯಾಂಪಸ್ ಬಂದಿದ್ದಾರೆ..
ರಾಷ್ಟ್ರ ಧ್ವಜ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು
ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಕಾಲೇಜಿನ ಕ್ಯಾಂಪಸ್ ಬಂದಿದ್ದಾರೆ. ವಂದೇ ಮಾತರಂ, ಭಾರತ್ ಮತಾಕಿ ಜೈ ಘೋಷಣೆ ಕೂಗಿದ್ದಾರೆ. ಕೇಸರಿ-ಹಿಜಾಬ್ ನಡುವೆ ತ್ರಿವರ್ಣ ಧ್ವಜ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ : ಹಿಜಾಬ್-ಕೇಸರಿ ವಿವಾದ : 3 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ