ಶಿವಮೊಗ್ಗ:ತಲೆಕೆಟ್ಟವರು ರಾಜೀನಾಮೆ ಕೇಳಿದ್ರೆ ನೀಡುವುದಕ್ಕೆ ಆಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆ ಕೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
‘ತಲೆಕೆಟ್ಟೋರು ರಾಜೀನಾಮೆ ಕೇಳ್ತಾರೆ ಅಂದ್ರೆ ಕೊಡೋಕೆ ಆಗುತ್ತಾ?’: ಸಿಎಂ ಎದಿರೇಟು
ಇಂದು ಮಧ್ಯಾಹ್ನ ಶಿವಮೊಗ್ಗಕ್ಕೆ ಆಗಮಿಸಿದೆ ಸಿಎಂ ಬಿಎಸ್ವೈ, ಸಾವಯುವ ಆಹಾರದ ಬದಲು ವಿಷಪೂರಿತ ಆಹಾರವನ್ನು ನಾವು ಸೇವಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದು, ಅದಲ್ಲದೇ ರಾಜೀನಾಮೆ ವಿಷಯವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿಯಾಗೇ ಟಾಂಗ್ ನೀಡಿದ್ದಾರೆ.
ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ಸುಭಿಕ್ಷಾ ಸಾವಯವ ಸಮಾವೇಶದ ಉದ್ಘಾಟನೆಗೆ ಆಗಮಿಸಿದ ವೇಳೆ, ಶಿವಮೊಗ್ಗದ ಹೆಲಿಪ್ಯಾಡ್ನಲ್ಲಿ ಸುದ್ದಿಗಾರೂಂದಿಗೆ ಮಾತನಾಡಿದ ಸಿಎಂ, ಗೋಲಿಬಾರ್ ಬಗ್ಗೆ ಮಾಹಿತಿ ಇಲ್ಲದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ, ತಲೆ ಕೆಟ್ಟವರ ಮಾತಿಗೆ ಬೆಲೆ ಕೊಡುವುದಿಲ್ಲ ಎಂದಿದ್ದಾರೆ. ಇನ್ನು ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳಿಂದ ವಿಷಪೂರಿತ ಆಹಾರ ಬೆಳೆಯುತ್ತಿದ್ದೇವೆ. ಇದರಿಂದ ಅನೇಕ ರೋಗ -ರುಜಿನೆಗಳಿಗೆ ನಾವು ತುತ್ತಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಉದ್ದೇಶ ಪೂರಿತವಾಗಿ ಅಲ್ಪಸಂಖ್ಯಾತರಲ್ಲಿ ಗೊಂದಲವನ್ನುಂಟು ಮಾಡಲಾಗುತ್ತಿದೆ. ಯಾರು ಪ್ರತಿಭಟನೆ ನಡೆಸುತ್ತಿದ್ದಾರೆ, ಅವರು ಅಲ್ಪಸಂಖ್ಯಾತರಿಗೆ ಅನ್ಯಾಯ ಆಗ್ತಾ ಇದೆ ಅಂತ ಮಾತನಾಡುತ್ತಿಲ್ಲ. ಎಲ್ಲ ರೀತಿಯ ಹಿನ್ನಡೆ ಅನುಭವಿಸಿದವರು ಈ ರೀತಿ ಗೊಂದಲವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.