ಕರ್ನಾಟಕ

karnataka

ETV Bharat / state

ನೋಡಿ: ಶಿವಮೊಗ್ಗದ ಸೌಂದರ್ಯ ಹೆಚ್ಚಿಸಿದ ಸ್ಮಾರ್ಟ್ ಸಿಟಿಯ ಮ್ಯೂರಲ್ ಆರ್ಟ್ - Mural Arts

ನಗರದ ಮಹಾತ್ಮ ಗಾಂಧಿ ಉದ್ಯಾನವನ ಹಾಗೂ ಫ್ರೀಡಂಪಾರ್ಕ್ ಮುಂಭಾಗದಲ್ಲಿ ಮ್ಯೂರಲ್ ಆರ್ಟ್ ರಚಿಸಲಾಗಿದ್ದು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

Smart City Mural Arts enhances the beauty of Shivamogga
ಶಿವಮೊಗ್ಗದ ಸೌಂದರ್ಯ ಹೆಚ್ಚಿಸಿದ ಸ್ಮಾರ್ಟ್ ಸಿಟಿಯ ಮ್ಯೂರಲ್ ಆರ್ಟ್ಸ್

By

Published : Jun 19, 2022, 8:39 AM IST

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಈ ಯೋಜನೆಯ ವತಿಯಿಂದ ನಗರದ ಇಕ್ಕೆಲಗಳಲ್ಲಿ ಮ್ಯೂರಲ್ ಆರ್ಟ್ಸ್(Mural arts) ರಚಿಸಲಾಗಿದ್ದು ನೋಡಲು ಮೋಹಕವಾಗಿದೆ.


ಮಹಾತ್ಮ ಗಾಂಧಿ ಉದ್ಯಾನವನ ಹಾಗೂ ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಈ ಮ್ಯೂರಲ್ ಕಲೆ ಕಂಡುಬರುತ್ತದೆ. ಉಬ್ಬು ಶಿಲ್ಪಗಳನ್ನು ರಾಜ್ಯ ಚಿತ್ರಕಲಾ ಪರಿಷತ್ ನಿರ್ಮಿಸಿದೆ.


ಅನುಭವ ಮಂಟಪ, ಸ್ವಚ್ಛ ಭಾರತದ ಚಿತ್ರಗಳು, ಜಿಲ್ಲೆಯ ಶಿವಪ್ಪ ನಾಯಕ ಅರಮನೆ, ಕುದುರೆಯನ್ನೇರಿದ ಶಿವಪ್ಪ ನಾಯಕ, ಹುಲಿ-ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು, ಸ್ಮಾರ್ಟ್ ಸಿಟಿಯ ಜನತೆ ಹೀಗೆ ಅನೇಕ ಬಗೆಯ ಆಕರ್ಷಕ ಮ್ಯೂರಲ್ ಆರ್ಟ್ ಕಾಣಸಿಗುತ್ತದೆ.


ಫ್ರೀಡಂ ಪಾರ್ಕ್​​ನಲ್ಲಿರುವ ಮ್ಯೂರಲ್ ಆರ್ಟ್​ನಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಶರಣರನ್ನು ರಚಿಸಲಾಗಿದೆ. ಸ್ವಚ್ಛಭಾರತ ಅಭಿಯಾನದ ಚಿತ್ರಣದಲ್ಲಿ ಕಸ ಸಂಗ್ರಹಿಸುವ ಪೌರ ಕಾರ್ಮಿಕರು, ಅದರ ಮಧ್ಯೆ ಮಹಾತ್ಮ ಗಾಂಧಿ ಕುಳಿತಿರುವ ಚಿತ್ರಣವಿದೆ. ಫ್ರೀಡಂ ಪಾರ್ಕ್ ಮುಂಭಾಗದ ಗೋಡೆಗಳ‌ ಮೇಲೆ ಕೆಳದಿಯ ಶಿವಪ್ಪನಾಯಕ, ಅರಮನೆ, ಪಕ್ಕದಲ್ಲಿ ಕುದುರೆಯನ್ನೇರಿದ ಶಿವಪ್ಪ ನಾಯಕ, ಸಕ್ರೆಬೈಲು ಆನೆ ಬಿಡಾರವಿದೆ. ಅದರ ಪಕ್ಕದಲ್ಲಿ ಹುಲಿ ಮತ್ತು ಸಿಂಹಧಾಮ, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳನ್ನು ನೋಡಬಹುದು.


ರಾಕೆಟ್ ಉಡಾವಣೆ, ಆಧುನಿಕತೆಯ ಚಿತ್ರಣ ಹೀಗೆ ವಿಜ್ಞಾನದ ಕುರಿತ ಕೆಲವು ಚಿತ್ರಗಳಿವೆ. ಸ್ಮಾರ್ಟ್ ಸಿಟಿಯ ಚಿತ್ರಣವೂ ಸಹ ಸೊಗಸಾಗಿ ಮೂಡಿಬಂದಿದೆ. ಇದರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ,‌ ಕಾಮಗಾರಿ ನಂತರದ ರಸ್ತೆಗಳು, ರಸ್ತೆಯಲ್ಲಿ ಓಡಾಡುವ ಜನತೆ ಸೇರಿದಂತೆ ವಾಹನಗಳನ್ನು ರಚಿಸಲಾಗಿದೆ.


ಇದನ್ನೂ ಓದಿ:ಗ್ರಾಮಕ್ಕೆ ನುಗ್ಗಿ ಹಸು ಬೇಟೆಯಾಡಿದ ಸಿಂಹ.. ಬೆಚ್ಚಿಬಿದ್ದ ಜನ

ABOUT THE AUTHOR

...view details