ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಉತ್ತಮ ಸಂಸದೀಯ ಪಟು ಅಲ್ಲ: ಆಯನೂರು ಮಂಜುನಾಥ್​ - ದೊರೆಸ್ವಾಮಿ

ಸಿದ್ದರಾಮಯ್ಯ ಶಾಸಕ, ಸಿಎಂ ಆದರೂ ಉತ್ತಮ ಸಂಸದೀಯ ಪಟು ಆಗಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. ದೊರೆಸ್ವಾಮಿ ಕುರಿತು ಶಾಸಕ ಯತ್ನಾಳ್ ಹೇಳಿಕೆಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ಹೊರಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

MLC Ayanuru Manunath
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್

By

Published : Mar 1, 2020, 2:00 PM IST

ಶಿವಮೊಗ್ಗ: ಹೆಚ್.ಎಸ್.ದೊರೆಸ್ವಾಮಿ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರನೆಂಬ ಕ್ರೆಡಿಟ್‌ ಅನ್ನು ಎಲ್ಲದಕ್ಕೂ ಬಳಸಬಾರದು ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ನಗರದಲ್ಲಿ ದೊರೆಸ್ವಾಮಿ ಕುರಿತು ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಹೇಳ್ತಾ ಇರ್ತಾರೆ. ದೊರೆಸ್ವಾಮಿ ಶತಾಯುಷಿ. ಇವರಿಬ್ಬರ ಬಗ್ಗೆ ಪರ ವಿರೋಧ ಹೇಳಿಕೆ ನಡುವೆ ದೊರೆಸ್ವಾಮಿನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ದೊರೆಸ್ವಾಮಿಯಾಗಿ ತಮ್ಮ ನಿಲುವು ಪ್ರಕಟ ಮಾಡುತ್ತಾರೋ. ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಕಟ ಮಾಡುತ್ತಾರೋ ಅವರು ಸ್ಪಷ್ಟ ಪಡಿಸಬೇಕು. ಹಾಗೆಯೇ ಯತ್ನಾಳ್ ಹೇಳಿಕೆಯಲ್ಲಿ ಕೆಲ ಪದಗಳ ಬಳಕೆ ಅಷ್ಟು ಸಮಂಜಸ ಆಗಿಲ್ಲ. ದೊರೆಸ್ವಾಮಿ ನೂರು ವರ್ಷದಲ್ಲಿ ಅನುಭವಿಸದೇ ಇರುವುದನ್ನು ಈಗ ಅನುಭವಿಸುವಂತಾಗಿದೆ. ಈ ವಿವಾದ ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್

ಕಾಂಗ್ರೆಸ್​ ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ಹೊರಟಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಜೆಟ್ ಅಧಿವೇಶನಲ್ಲಿ ಮಾತನಾಡಲು ಬೇರೆ ವಿಷಯವೇ ಸಿಕ್ಕಿಲ್ಲ. ಅದಕ್ಕೆ ಯತ್ನಾಳ್​ ಹೇಳಿಕೆ ಕುರಿತು ಅಧಿವೇಶನದಲ್ಲಿ ಮಾತನಾಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿ ಇರೋಕೆ ಈ ವಿಷಯ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಶಾಸಕ, ಸಿಎಂ ಆದರೂ ಉತ್ತಮ ಸಂಸದೀಯ ಪಟು ಆಗಲಿಲ್ಲ ಎಂದು ಹೇಳಿದರು.

ABOUT THE AUTHOR

...view details