ಕರ್ನಾಟಕ

karnataka

ETV Bharat / state

ಆತ್ಮೀಯ ಸ್ನೇಹಿತ, ವೈದ್ಯ ಹುಲುಮನಿ ಅಗಲಿಕೆಗೆ ಸಿದ್ದರಾಮಯ್ಯ ಕಂಬನಿ - ಶಿವಮೊಗ್ಗ

ಖ್ಯಾತ ವೈದ್ಯ ಮಲ್ಲೇಶದ ಹುಲುಮನಿ ರವರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂಬನಿ‌ ಮಿಡಿದಿದ್ದಾರೆ.

Dr mallesh hulimani
Dr mallesh hulimani

By

Published : Aug 25, 2020, 4:34 PM IST

Updated : Aug 25, 2020, 4:47 PM IST

ಶಿವಮೊಗ್ಗ:ಶಿವಮೊಗ್ಗದ ಖ್ಯಾತ ವೈದ್ಯ ಮಲ್ಲೇಶದ ಹುಲುಮನಿ ರವರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂಬನಿ‌ ಮಿಡಿದಿದ್ದಾರೆ. ಈ ಕುರಿತು‌ ಶೋಕ‌ ಸಂದೇಶವನ್ನು‌ ಕಳುಹಿಸಿದ್ದಾರೆ.

ನನ್ನ ಆತ್ಮೀಯ ಮಿತ್ರರಾದ ಡಾ.ಮಲ್ಲೇಶ ಹುಲಿಮನಿ ರವರ ನಿಧನ ನನಗೆ ಆಘಾತ ಉಂಟು ಮಾಡಿದೆ. ಶಿವಮೊಗ್ಗ ಪ್ರವಾಸಕ್ಕೆ ಹೋದಾಗ ಮಲ್ಲೇಶ್ ರವರ ಮನೆಗೆ ತಪ್ಪದೆ ಭೇಟಿ‌ ನೀಡುತ್ತಿದ್ದೆ, ಅವರೊಂದಿಗಿನ ಆತ್ಮೀಯತೆ ಮರೆಯಲು ಸಾಧ್ಯವೆ ಇಲ್ಲ, ಅವರ ಕುಟುಂಬಕ್ಕೆ ನೋವವನ್ನು ಭರಿಸುವ ಶಕ್ತಿಯನ್ನು‌ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಾ.ಮಲ್ಲೇಶ್ ಹುಲುಮನಿ ರವರು ಆತ್ಮೀಯ ಸ್ನೇಹಿತರಾಗಿದ್ದರು. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕೆಪಿಸಿಸಿಯ ವೈದ್ಯಕೀಯ ವಿಭಾಗದಲ್ಲಿ‌ ಅವರು ಕಾರ್ಯನಿರ್ವಹಿಸಿದ್ದರು.

Last Updated : Aug 25, 2020, 4:47 PM IST

ABOUT THE AUTHOR

...view details