ಶಿವಮೊಗ್ಗ:ಜಿಲ್ಲೆಯ ಪಟ್ಟಣ ಪಂಚಾಯತ್ನ 11ವಾರ್ಡ್ಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 11ವಾರ್ಡ್ಗಳಲ್ಲಿ 9 ಕಡೆ ಬಿಜೆಪಿ ಗೆಲುವಿನ ನಗೆ ಬೀರಿದೆ.
ಕಳೆದ ಅವಧಿಯಲ್ಲಿ ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಬಾರಿ ಸೋತು ಸುಣ್ಣವಾಗಿದೆ. ಮೊದಲ ಬಾರಿಗೆ ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ನಲ್ಲಿ ಕಮಲ ಅರಳಿದೆ. ಕೇವಲ ಒಂದು ವಾರ್ಡ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನೊಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.