ಶಿವಮೊಗ್ಗ: ಶಿವಮೊಗ್ಗ ತಮಿಳು ಸಮಾಜದವರು ಸಚಿವ ಈಶ್ವರಪ್ಪ ಅವರ ಮನೆಗೆ ತೆರಳಿ ಸಂಕ್ರಾಂತಿಯ ಶುಭಾಶಯ ಕೋರಿದ್ದಾರೆ. ಸಂಕ್ರಾಂತಿಯನ್ನು ತಮಿಳು ನಾಡಿನಲ್ಲಿ ಪೊಂಗಲ್ ಹಬ್ಬವನ್ನಾಗಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ಇದರಿಂದ ಶಿವಮೊಗ್ಗದ ಎಲ್ಲ ತಮಿಳು ಸಮಾಜದವರು ಶಿವಮೊಗ್ಗದ ಮಲ್ಲೇಶ್ವರ ನಗರದ ಸಚಿವ ಈಶ್ವರಪ್ಪ ಮನೆಗೆ ಸಚಿವರ ಜೊತೆ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್ ಅವರಿಗೆ ಶಾಲು, ಹಾರ ಹಾಗೂ ತಮಿಳುನಾಡಿನ ಪೇಟ ಹಾಕಿ ತಮ್ಮದೆ ಸ್ಟೈಲ್ ನಲ್ಲಿ ಶುಭಾಶಯ ಕೋರಿದ್ದಾರೆ.