ಕರ್ನಾಟಕ

karnataka

ETV Bharat / state

ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ

ಅಹಿತಕರ ಘಟನೆ ನಡೆದ ನಗರದ ಹಳೆ ಭಾಗ ನಿನ್ನೆ ರಾತ್ರಿಯಿಂದ ಸಹಜ ಸ್ಥಿತಿಯತ್ತ ಸಾಗಿದೆ. ಅಹಿತಕರ ಘಟನೆ ನಡೆದ ಭಾಗದಲ್ಲಿ ಅಗತ್ಯ ವಸ್ತು ಖರೀದಿಗೆ ಒಂದು ಗಂಟೆ ಕಾಲಾವಕಾಶ ನೀಡಲಾಗಿದೆ. ರಾತ್ರಿಯಿಡಿ ಕರ್ಫ್ಯೂ ಹಾಕಿದ ಕಾರಣ ಜನ ಮನೆಯಿಂದ ಹೊರಗೆ ಬರದಂತೆ ಪೊಲೀಸರು ನೋಡಿಕೊಂಡಿದ್ದಾರೆ.

Shimoga which returns to normal
ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ

By

Published : Dec 4, 2020, 9:45 AM IST

ಶಿವಮೊಗ್ಗ:ಬಜರಂಗ ದಳ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯಿಂದ ಪ್ರಕ್ಷುಬ್ಧತೆ ಉಂಟಾಗಿದ್ದ ನಗರದ ಹಳೆ ಭಾಗ ನಿನ್ನೆ ರಾತ್ರಿಯಿಂದ ಸಹಜ ಸ್ಥಿತಿಯತ್ತ ಮರಳಿದೆ. ಲಷ್ಕರ್​ ಮೊಹಲ್ಲಾ, ಗಾಂಧಿ ಬಜಾರ್, ರವಿವರ್ಮ ಬೀದಿ, ಆಜಾದ್ ನಗರ ಭಾಗದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು.

ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸರ್ಕಲ್ ಗಳಲ್ಲಿ ಬ್ಯಾರಿಕೇಡ್​ ಹಾಕಲಾಗಿದೆ. ರಾತ್ರಿಯಿಡಿ ಕರ್ಫ್ಯೂ ಹಾಕಿದ ಕಾರಣ ಜನ ಮನೆಯಿಂದ ಹೊರಗೆ ಬಂದಿಲ್ಲ.

ಓದಿ:ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ: ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿ

ಶಿವಮೊಗ್ಗ ಜಿಲ್ಲೆ ಅಲ್ಲದೆ ಚಿಕ್ಕಮಗಳೂರು, ಹಾವೇರಿ ಜಿಲ್ಲೆಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಲಾಗಿದೆ. ಅಹಿತಕರ ಘಟನೆ ನಡೆದ ಭಾಗದಲ್ಲಿ ಅಗತ್ಯ ವಸ್ತು ಖರೀದಿಗೆ ಒಂದು ಗಂಟೆ ಕಾಲಾವಕಾಶ ನೀಡಲಾಗಿದೆ. ಇಂದು ಸಚಿವ ಈಶ್ವರಪ್ಪ ಗಾಯಾಳುವನ್ನು ಭೇಟಿ ಮಾಡಲಿದ್ದಾರೆ. ನಂತರ ಐಜಿಪಿ, ಡಿಸಿ ಹಾಗೂ ಎಸ್ಪಿ ಮಾಧ್ಯಮಗೋಷ್ಟಿ ನಡೆಸಲಿದ್ದಾರೆ.

ABOUT THE AUTHOR

...view details