ಶಿವಮೊಗ್ಗ: ಅಶೋಕ ನಗರದ ವೃದ್ಧರೊಬ್ಬರು ಕೊರೊನಾ ಸೋಂಕಿನಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊರೊನಾಗೆ ವೃದ್ಧ ಬಲಿ: ಶಿವಮೊಗ್ಗ ಜಿಲ್ಲೆಯಲ್ಲಿ 25ಕ್ಕೆ ಏರಿದ ಸಾವಿನ ಸಂಖ್ಯೆ - ಕೋವಿಡ್ನಿಂದ ವೃದ್ಧ ಸಾವು
ಕೊರೊನಾ ಸೋಂಕಿನಿಂದ ಶಿವಮೊಗ್ಗದ ಅಶೋಕ ನಗರದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

ಕೋವಿಡ್ನಿಂದ ಅಶೋಕ ನಗರದ ವೃದ್ಧ ಸಾವು
ಎರಡು ದಿನಗಳ ಹಿಂದೆ 60 ವರ್ಷದ ಇವರು ಉಸಿರಾಟದ ಸಮಸ್ಯೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.