ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಮಾರಾಟ: ಭದ್ರಾವತಿಯಲ್ಲಿ ಇಬ್ಬರ ಬಂಧನ - ಗಾಂಜಾ ಮಾರಾಟ
ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಸೈಯ್ಯದ್ ಅರ್ಬಾಜ್ ಅಲಿಯಾದ್ ಮಂಡ್ಯ (23) ಹಾಗೂ ಪರ್ವಿಜ್ ಅಲಿಯಾಸ್ ಮಾಯಾ (22) ಬಂಧಿತ ಆರೋಪಿಗಳು. ಭದ್ರಾವತಿಯ ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರಾವತಿಯ ನಗರ ಸಿಪಿಐ ಅವರ ತಂಡ ದಾಳಿ ನಡೆಸಿತ್ತು.
ಬಂಧಿತರಿಂದ 2 ಕೆಜಿ 200 ಗ್ರಾಂ ಗಾಂಜಾ, 1,600 ರೂ. ಹಾಗೂ 1 ಬೈಕ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ NDPS (ಅಬಕಾರಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.