ಶಿವಮೊಗ್ಗ:ಕೇಸರಿ ಶಾಲು, ಹಿಜಾಬ್ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಶಿವಮೊಗ್ಗ ನಗರದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ ಅಂತ್ಯಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಹಿಜಾಬ್ ಸಂಘರ್ಷ: ನಿಷೇಧಾಜ್ಞೆ ಅಂತ್ಯ, ಸಹಜ ಸ್ಥಿತಿಯತ್ತ ಶಿವಮೊಗ್ಗ
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ನಡೆದ ಗಲಾಟೆಯನ್ನು ತಿಳಿಗೊಳಿಸಲು ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದನ್ನು ಹಿಂಪಡೆಯಲಾಗಿದ್ದು, ಸದ್ಯ ಮಲೆನಾಡು ಶಾಂತವಾಗಿದೆ.
ಸಹಜ ಸ್ಥತಿಯತ್ತ ಮಲೆನಾಡು ಶಿವಮೊಗ್ಗ
ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು, ರುದ್ರಪ್ಪ ಕಾಲೇಜು, ಎಟಿಎನ್ಸಿಸಿ ಕಾಲೇಜು ಹಾಗು ಸರ್ಕಾರಿ ಕಾಲೇಜುಗಳಲ್ಲಿ ಉಂಟಾಗಿದ್ದ ಕೇಸರಿ ಶಾಲು ಹಾಗು ಹಿಜಾಬ್ ಗಲಭೆಯ ವೇಳೆ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ತಹಶೀಲ್ದಾರ್ ಎರಡು ದಿನಗಳ ಕಾಲ ನಗರದಾದ್ಯಂತ ಸೆಕ್ಷನ್144 ಜಾರಿ ಮಾಡಿದ್ದರು.
ಇದನ್ನೂ ಓದಿ:ಹಿಜಾಬ್ -ಕೇಸರಿ ಶಾಲು ವಿವಾದ: ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್