ಕರ್ನಾಟಕ

karnataka

ETV Bharat / state

ಹೆಚ್ಚುತ್ತಿರುವ ಕೊರೊನಾ: ಶಾಲಾ, ಕಾಲೇಜುಗಳನ್ನು ಆಸ್ಪತ್ರೆ ಮಾಡಲು ಹೊರಟ ಜಿಲ್ಲಾಡಳಿತ

ಈಗಾಗಲೇ ಮೆಗ್ಗಾನ್ ಕೋವಿಡ್ ಆಸ್ಪತ್ರೆಯ ಬೆಡ್​ಗಳು ಭರ್ತಿಯಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ದೊರಕಿಸಿ‌ಕೊಡುವ ದೃಷ್ಟಿಯಿಂದ ಜಿಲ್ಲಾಡಳಿತ ಈಗ ವಸತಿ‌ ಶಾಲೆ, ಶಾಲಾ-ಕಾಲೇಜುಗಳನ್ನು ಆಸ್ಪತ್ರೆ ಮಾಡಲು ಹೊರಟಿದೆ.

Hospitalize Schools and Colleges
ಹೆಚ್ಚುತ್ತಿರುವ ಕೋವಿಡ್​ : ಶಾಲಾ, ಕಾಲೇಜುಗಳನ್ನು ಆಸ್ಪತ್ರೆ ಮಾಡಲು ಹೊರಟ ಜಿಲ್ಲಾಡಳಿತ

By

Published : Jul 5, 2020, 10:07 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಯಲ್ಲಿಡಲು ಹಾಗೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರಕಿಸಿ‌ ಕೊಡುವ ದೃಷ್ಟಿಯಿಂದ ಜಿಲ್ಲಾಡಳಿತ ಈಗ ವಸತಿ‌ ಶಾಲೆ ಹಾಗೂ ಶಾಲಾ- ಕಾಲೇಜುಗಳನ್ನು ಆಸ್ಪತ್ರೆ ಮಾಡಲು ಹೊರಟಿದೆ.

ಹೆಚ್ಚುತ್ತಿರುವ ಕೋವಿಡ್​ : ಶಾಲಾ, ಕಾಲೇಜುಗಳನ್ನು ಆಸ್ಪತ್ರೆ ಮಾಡಲು ಹೊರಟ ಜಿಲ್ಲಾಡಳಿತ

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಶಿವಮೊಗ್ಗ ತಾಲೂಕು ಆಡಳಿತದ ಜೊತೆಗೆ ತಾಲೂಕಿನ‌ ಗಾಜನೂರು ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ನವಲೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಮೇಲಿನ ಹನಸವಾಡಿ ಬಾಲಕಿಯರ ವಿದ್ಯಾರ್ಥಿ ನಿಲಯ ಹೀಗೆ ಹಲವೆಡೆ ಭೇಟಿ ನೀಡಿದ್ದಾರೆ.

ಈ ವೇಳೆ ತಹಶೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು. ಈಗಾಗಲೇ ಮೆಗ್ಗಾನ್ ಕೋವಿಡ್ ಆಸ್ಪತ್ರೆಯ ಬೆಡ್​ಗಳು ಭರ್ತಿಯಾಗಿದ್ದು, ಬೇರೆ ವ್ಯವಸ್ಥೆ ಮಾಡುವ ಅನಿವಾರ್ಯತೆ ಜಿಲ್ಲಾಡಳಿತಕ್ಕೆ ಎದುರಾಗಿದೆ.

ABOUT THE AUTHOR

...view details