ಶಿವಮೊಗ್ಗ: ನವಧ್ಯಾನ್ಯಗಳಿಗೆ ಪೂಜೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು, ಸಂಕ್ರಾತಿ ಹಬ್ಬದ ಹಾಡಿಗೆ ನೃತ್ಯ ಮಾಡುತ್ತಿರುವ ಸ್ಟುಡೆಂಟ್ಸ್, ಕಲರ್ ಫುಲ್ ರೇಷ್ಮೇ ಸೀರೆಗಳು, ಪಂಚೆ, ಶಲ್ಯ ಉಡುಗೆ ತೊಟ್ಟು ಕಂಗೂಳಿಸುತ್ತಿರುವ ವಿದ್ಯಾರ್ಥಿಗಳು, ಹೌದು ಈ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗ ನಗರದ ಕುವೆಂಪು ಮಹಾವಿದ್ಯಾಲಯದ ಅವರಣದಲ್ಲಿ. ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಆಚಾರ - ವಿಚಾರ ಮರೆಯಾಗುತ್ತಿರುವುದರ ನಡೆವೆಯೂ ಈ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ.
ಕಾಲೇಜಿನ ಸಾಂಸ್ಕೃತಿಕ ದಿನಾಚಾರಣೆಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತವಾಗಿ ಕಾಲೇಜಿನ ಕ್ಯಾಂಪಸ್ನಲ್ಲಿ ತಳಿರು ತೋರಣ ಕಟ್ಟಿ ಶೃಂಗರಿಸಿ, ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಿದ್ರು. ಹಳ್ಳಿಗಳಲ್ಲಿ ಸಂಕ್ರಾತಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡುತ್ತಾರೋ ಅದೇ ರೀತಿ, ಭತ್ತ, ರಾಗಿ, ಜೋಳವನ್ನು ರಾಶಿ ಮಾಡಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಕಬ್ಬಿನ ಜಲ್ಲೆಗಳ ನಡುವೆ ನವಧಾನ್ಯಗಳನ್ನಿಟ್ಟು ಪದ್ಧತಿಯಂತೆ ಹಬ್ಬ ಆಚರಿಸಿದ್ದಾರೆ.