ಕರ್ನಾಟಕ

karnataka

ETV Bharat / state

ಮರಳು ಕ್ವಾರಿಗಳನ್ನು ತೆರೆಯಲು ಜಿಲ್ಲಾಡಳಿತ ನಕಾರ: ಸಂಕಷ್ಟದಲ್ಲಿ ಲಾರಿ ಮಾಲೀಕರು

ಶಿವಮೊಗ್ಗ ಜಿಲ್ಲಾಡಳಿತ ತೀರ್ಥಹಳ್ಳಿಯ ಮರಳು ಕ್ವಾರಿಗಳನ್ನು ತೆರೆಯಲು ಅನುಮತಿ ನೀಡುತ್ತಿಲ್ಲ. ಕೇವಲ ಹೊಸನಗರ ಕ್ವಾರಿಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದು, ಇದರಿಂದ ಜಿಲ್ಲೆಯಲ್ಲಿ ಮರಳಿನ ಬೇಡಿಕೆ ಹೆಚ್ಚಾಗಿದೆ. ಜಿಲ್ಲಾಡಳಿತ ತಕ್ಷಣ ಮರಳು ಕ್ವಾರಿಗಳನ್ನು ತೆರೆಯುವಂತೆ ಜನ ಸಾಮಾನ್ಯರು ಹಾಗೂ ಮರಳು ಲಾರಿ ಮಾಲೀಕರು ಆಗ್ರಹಿಸಿದ್ದಾರೆ.

Shivamogga
ಶಿವಮೊಗ್ಗ ಜಿಲ್ಲಾಡಳಿತ

By

Published : Feb 10, 2020, 10:54 PM IST

ಶಿವಮೊಗ್ಗ: ಜಿಲ್ಲೆಯ ಹೊಸನಗರ, ಭದ್ರಾವತಿ, ಹೊಳೆಹೊನ್ಜೂರು, ಹೊಳಲೂರು ಭಾಗದಲ್ಲಿ ಮರಳಿನ ಕ್ವಾರಿಗಳಿದ್ದರೂ ಸಹ ಕೇವಲ ಹೊಸನಗರ ಕ್ವಾರಿಗಳಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಇದರಿಂದ ಜಿಲ್ಲೆಯಲ್ಲಿ ಮರಳಿನ ಬೇಡಿಕೆ ಹೆಚ್ಚಾಗಿದ್ದು, ತಕ್ಷಣ ಮರಳು ಕ್ವಾರಿಗಳನ್ನು ತೆರೆಯುವಂತೆ ಜನಸಾಮಾನ್ಯರು ಹಾಗೂ ಮರಳು ಲಾರಿ ಮಾಲೀಕರು ಆಗ್ರಹಿಸಿದ್ದಾರೆ.

ಮರಳು ಕ್ವಾರಿಗಳನ್ನು ತೆರೆಯುವಂತೆ ಜನಸಾಮಾನ್ಯರು ಹಾಗೂ ಮರಳು ಲಾರಿ ಮಾಲೀಕರ ಆಗ್ರಹ

ಮರಳನ್ನೇ ನಂಬಿ ಲಾರಿ ಖರೀದಿಸಿದ ಮಾಲೀಕರು ಈಗ ಲಾರಿ ಸಾಲದ ಕಂತು ಕಟ್ಟಲಾಗದೆ ಲಾರಿಯನ್ನು ಮಾರುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಮಳೆಗಾಲದಲ್ಲಿ ಹೊಳೆಗಳು ತುಂಬಿ ಹರಿಯುವುದರಿಂದ ಮರಳು ತೆಗೆಯಲು ಅವಕಾಶ ನೀಡುವುದಿಲ್ಲ. ಆದರೆ ಮಳೆ ನಿಂತು ಮೂರು-ನಾಲ್ಕು ತಿಂಗಳಾದ್ರು ಮರಳು‌ ಕ್ವಾರಿಯನ್ನು ತೆರೆಯದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ನಮಗೆ ಮರಳು ವ್ಯಾಪಾರ ಬಿಟ್ಟು ಬೇರೆ ವ್ಯಾಪಾರ ತಿಳಿದಿಲ್ಲ. ಇದರಿಂದ ತಕ್ಷಣ ಜಿಲ್ಲಾಧಿಕಾರಿಗಳು ಮರಳು ಕ್ವಾರಿಗಳನ್ನು ತೆರೆಯುವಂತೆ ಮರಳು ಲಾರಿ ಸಂಘದ ಉಪಾಧ್ಯಕ್ಷ ಜಾಕೀರ್ ಆಗ್ರಹಿಸಿದ್ದಾರೆ.

ಇನ್ನು, ಇದೇ ಲಾರಿಯವರು ದಾವಣಗೆರೆ ಜಿಲ್ಲೆಯಿಂದ ಮರಳು ತಂದಾಗ ಪರ್ಮಿಟ್ ಅವಧಿ ಮುಗಿದಿದೆ ಎಂದು ಹೇಳಿ ಲಾರಿಗಳನ್ನು ಸೀಜ್ ಮಾಡಿದ್ದರು. ಆದರೆ ಜಿಲ್ಲೆಯಲ್ಲಿಯೇ ಅಕ್ರಮವಾಗಿ ಮರಳು ಸಾಗಾಣೆ ಮಾಡುವುದನ್ನು ಪೊಲೀಸರು‌ ಹಿಡಿಯಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈಗಾಗಲೇ ತೀರ್ಥಹಳ್ಳಿಯ ಗಬಡಿ, ಮಹಿಷಿ, ತುದೂರು‌ ಸೇರಿದಂತೆ ಇತರೆ ಭಾಗಗಳಲ್ಲಿ ಮರಳು ಕ್ವಾರಿ ತೆರೆಯುವಂತೆ ಶಾಸಕ ಆರಗ ಜ್ಞಾನೇಂದ್ರರವರು ಎಸಿಯರವರ ಜೊತೆ ಸಭೆ ನಡೆಸಿದ್ದು, ‌ಆದಷ್ಟು ಬೇಗ ಮರಳು ಕ್ಚಾರಿ ತೆರೆಯುವಂತೆ ಸೂಚನೆ ನೀಡಲಾಗಿದೆ ಎಂದು ತೀರ್ಥಹಳ್ಳಿ ಶಾಸಕ‌ ಆರಗ ಜ್ಞಾನೇಂದ್ರ ಹೇಳಿದರು.

ABOUT THE AUTHOR

...view details