ಕರ್ನಾಟಕ

karnataka

ETV Bharat / state

ಸಮಾಜವಾದಿ ನೆಲದಲ್ಲಿ ದಕ್ಷಿಣ ಭಾರತದ ಮೊದಲ‌ ರೈತರ ಮಹಾ ಪಂಚಾಯತ್.. ಮೋದಿ ವಿರುದ್ಧ ರಣಕಹಳೆ

ಈ ಹೋರಾಟದ ಕಿಚ್ಚಿಗೆ ಮೋದಿ ಸರ್ಕಾರ ಒಂದಲ್ಲ ಒಂದು ದಿನ ಸುಟ್ಟು ಹೋಗುತ್ತದೆ. ಕಿಸಾನ್ ಮಂಚ್ ಹೆಸರಿನಲ್ಲಿ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗಿದೆ. ದೇಶದ ಎಲ್ಲಾ ರೈತ ಸಂಘಗಳು, ಹೋರಾಟ ಸಂಘಟನೆಗಳು ಒಂದಾಗಿವೆ. ಇದರಿಂದ ಕೇಂದ್ರ ಸರ್ಕಾರ ತನ್ನ ರೈತ ವಿರೋಧಿ ಮೂರು ಕಾನೂನುಗಳನ್ನು ವಾಪಸ್ ಪಡೆಯಬೇಕೆಂದರು ದೆಹಲಿಯಲ್ಲಿ ಮೋದಿ ಟ್ಯಾಂಕರ್ ತಂದು ನಿಲ್ಲಿಸಿದ್ರು ಸಹ ತಮ್ಮ ಹೋರಾಟ ಮುಂದುವರೆಯುತ್ತದೆ..

raitha_mahapanchayath in shimogga news
ರೈತರ ಮಹಾ ಪಂಚಾಯತ್

By

Published : Mar 20, 2021, 11:01 PM IST

Updated : Mar 21, 2021, 6:58 AM IST

ಶಿವಮೊಗ್ಗ :ಸಮಾಜವಾದಿ ನೆಲೆಯಲ್ಲಿ ರೈತರ ಮಹಾ ಪಂಚಾಯತ್ ಪ್ರಥಮ ಸಮಾವೇಶಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿವೆ.

ರೈತರ ಮಹಾ ಪಂಚಾಯತ್..

ದೆಹಲಿಯಿಂದ ಬಂದ ರೈತ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ‌ ಕಾಯ್ದೆಯ ವಿರುದ್ದ ದಕ್ಷಿಣದ ರೈತರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿಯ ರೈತರಿಗೆ ಮಹಾ ಪಂಚಾಯತ್ ನಲ್ಲಿ‌ ಸೇರಿದ ರೈತರು ತಮ್ಮ ಬೆಂಬಲ ತೋರಿಸಿದ್ದಾರೆ.

ಓದಿ: ತೆಲಂಗಾಣ ಎಂಎಲ್​ಸಿ ಚುನಾವಣೆ : ಭರ್ಜರಿ ಜಯ ಸಾಧಿಸಿದ ಮಾಜಿ ಪ್ರಧಾನಿ ಪುತ್ರಿ

ದಕ್ಷಿಣ ಭಾರತದಲ್ಲಿ ನಡೆದ ರೈತ ಮಹಾ ಪಂಚಾಯತ್ ಸಮಾವೇಶದಲ್ಲಿ ಕಿಸಾನ್ ಸಂಯುಕ್ತ ಮೋರ್ಚಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಹಾಗೂ ಯುದ್ದವೀರ್ ಸಿಂಗ್ ದೆಹಲಿಯಿಂದ ಆಗಮಿಸಿ ದೆಹಲಿಯ ಹೋರಾಟಕ್ಕೆ ಕೈ ಜೋಡಿಸುವಂತೆ ವಿನಂತಿಸಿಕೊಂಡರು. ಮೊದಲು ಮಾತನಾಡಿದ ಡಾ.ದರ್ಶನ್ ಪಾಲ್ ಅವರು, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಕೇವಲ ಪಂಜಾಬ್, ಹರಿಯಾಣ ಹಾಗೂ ಮಧ್ಯಪ್ರದೇಶ ರೈತರ ಹೋರಾಟ ಎಂದು ಬಿಂಬಿಸಲಾಗುತ್ತಿದೆ.

ಇದರಿಂದ ನಮ್ಮ ದಕ್ಷಿಣ ಭಾರತ ರೈತರು ಏನ್ ಮಾಡ್ತಾ ಇದ್ದಾರೆ ಅಂತಾ ನೋಡಲು ಬಂದಿದ್ದೇವೆ. ನಿಮ್ಮ ಈ ಬೆಂಬಲ ನಮ್ಮ ಅಂತಿಮ ಹೋರಾಟದ ತನಕ ಇರಲಿ ಎಂದು ವಿನಂತಿಸಿ ಕೊಂಡರು. ಪಂಜಾಬ್‌ನಲ್ಲಿ ಮೊದಲು ಪ್ರಾರಂಭಿಸಿದ ಹೋರಾಟಕ್ಕೆ ಎಲ್ಲಾ ರೈತ ಬಣಗಳು ಬಂದು ಸೇರಲು ಎರಡು ತಿಂಗಳು ಬೇಕಾಯಿತು. ರೈತ ವಿರೋಧಿ ಕಾಯ್ದೆ ಕೊರೊನಾದ ಲಾಕ್ ಡೌನ್‌ನಲ್ಲಿ ತರುವ ಅವಶ್ಯಕತೆ ಇರಲಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ಈಗ ದೇಶಾದ್ಯಂತ ಹರಡುತ್ತಿದೆ.

ಈ ಹೋರಾಟದ ಕಿಚ್ಚಿಗೆ ಮೋದಿ ಸರ್ಕಾರ ಒಂದಲ್ಲ ಒಂದು ದಿನ ಸುಟ್ಟು ಹೋಗುತ್ತದೆ. ಕಿಸಾನ್ ಮಂಚ್ ಹೆಸರಿನಲ್ಲಿ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗಿದೆ. ದೇಶದ ಎಲ್ಲಾ ರೈತ ಸಂಘಗಳು, ಹೋರಾಟ ಸಂಘಟನೆಗಳು ಒಂದಾಗಿವೆ. ಇದರಿಂದ ಕೇಂದ್ರ ಸರ್ಕಾರ ತನ್ನ ರೈತ ವಿರೋಧಿ ಮೂರು ಕಾನೂನುಗಳನ್ನು ವಾಪಸ್ ಪಡೆಯಬೇಕೆಂದರು ದೆಹಲಿಯಲ್ಲಿ ಮೋದಿ ಟ್ಯಾಂಕರ್ ತಂದು ನಿಲ್ಲಿಸಿದ್ರು ಸಹ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ನಂತರ ಮಾತನಾಡಿದ ಯುದ್ದವೀರ್ ಸಿಂಗ್ ರವರು, ಕಳೆದ 120 ದಿನಗಳಿಂದ ದೆಹಲಿಯ ಗಡಿಯಲ್ಲಿ ನಮ್ಮ ಹೋರಾಟ ನಡೆಸುತ್ತಿದ್ದಾರೆ. ಹೋರಾಟದಲ್ಲಿ 350 ಜನ ರೈತರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ‌ ಡ್ಯಾನ್ಸರ್ ಒಬ್ಬಳು ಗಾಯಗೊಂಡ್ರೆ ಟ್ವೀಟ್ ಮಾಡುವ ಮೋದಿ ರೈತರು ಹೋರಾಟದಲ್ಲಿ ಸಾವನ್ನಪ್ಪಿದರೆ ಯಾವುದೇ ಪ್ರತಿಕ್ರಿಯೆ‌ ನೀಡಲ್ಲ. ‌ರೈತರು ದೆಹಲಿ ಹೋಗಿರುವುದು ಹೋರಾಟಕ್ಕೆ ದೆಹಲಿಯನ್ನು ಹೊತ್ತು ಕೊಂಡು ಬರಲು ಅಲ್ಲ. ತಮ್ಮ ಹಕ್ಕಲು ಕೇಳು ಹೋಗಿದ್ದಾರೆ.

ದೇಶವನ್ನು ಮೋದಿ ಸರ್ಕಾರ ಮಾರಾಟ ಮಾಡ್ತಾ ಇದ್ದರೆ ಜನ ಸುಮ್ಮನೆ ಇರುವುದು‌ ಆಶ್ಚರ್ಯ ತಂದಿದೆ. ದೇಶವನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಲಾಗುತ್ತಿದೆ. ದೇಶ ಮತ್ತೊಮ್ಮೆ ಗುಲಾಮಗಿರಿಯತ್ತ ಸಾಗುವಂತೆ ಮಾಡಿದ್ದಾರೆ. ದೆಹಲಿ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ‌ ಬೇಕಿದೆ. ಇದನ್ನು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಹೋರಾಟವಾಗಿ ರೂಪಿಸಬೇಕಿದೆ. ದೇಶವನ್ನು‌ ಧರ್ಮದ ಅಮಲಿನಲ್ಲಿ ಇಡಲಾಗಿದೆ. ರಾಮ ನಮ್ಮ ಸ್ವತ್ತು ಅಂತ ಹೇಳಲು ಸರ್ಕಾರ ಹೊರಟಿದೆ. ರೈತನ ಭೂಮಿಯೇ ರಾಮ, ರೈತನ ಬೆಳೆಯೇ ರಾಮ ಎಂದರು. ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ನಡೆಯಬೇಕಿದೆ. ಇದು ದೆಹಲಿಗೆ ತಲುಪಬೇಕಿದೆ ಎಂದರು.

ಕೊನೆಯದಾಗಿ ಮಾತನಾಡಿದ ರಾಕೇಶ್ ಟಿಕಾಯತ್ ರವರು, ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ನೆಲೆದಲ್ಲಿ ಹಲವು ಹೋರಾಟಗಳು ನಡೆದಿವೆ. ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವ ತನಕ ನಮ್ಮ ಹೋರಾಟ ನಡೆಯುತ್ತಲೆ ಇರುತ್ತದೆ. ಸದ್ಯ ರೈತನ ವಿರುದ್ದ ಮಾತ್ರ ಕಾನೂನು ತಂದಿದ್ದಾರೆ. ಮುಂದೆ ತಿನ್ನುವ ಅನ್ನದ ಮೇಲೂ ಸಹ ಕಾನೂನು ತರುತ್ತಾರೆ. ಆಹಾರ ಕ್ಷೇತ್ರದ ಮೇಲೆ ಕಂಪನಿಗಳು ಬರುವುದನ್ನು ತಡೆಯಬೇಕಿದೆ.

ಈಗಾಗಲೇ ಭೂಮಿ ಕಳೆದು ಕೊಂಡವರು ನಿರುದ್ಯೋಗಿಗಳಾಗಿದ್ದಾರೆ. ಬ್ಯಾಂಕ್ ಗಳನ್ನು ಕಡಿಮೆ ಮಾಡಿ ಅದನ್ನೆ ವಿಕಾಸ್ ಎನ್ನುತ್ತಿದ್ದಾರೆ. ದೇಶದ ಎಲ್ಲಾ ಕಡೆ ದೆಹಲಿ ಮಾದರಿಯ ಟ್ರ್ಯಾಕ್ಟರ್ ಪ್ರತಿಭಟನೆ ನಡೆಯಬೇಕಿದೆ. ದೇಶದ ರೈತರು ಎಚ್ಚೆತ್ತು‌ಕೊಳ್ಳದೆ ಹೋದ್ರೆ, ಮುಂದೆ ಪ್ರತಿಯೊಬ್ಬರು ಹಸಿವಿನಿಂದ ಇರಬೇಕಾಗುತ್ತದೆ. ಬ್ಯಾಂಕ್, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾವನ್ನು ಮಾರಾಟಕ್ಕೆ ಮಾಡಲಾಗಿದೆ.

ಮುಂದೆ ಬಿಎಸ್ಎನ್ಎಲ್ ಸಹ ಮಾರಾಟಕ್ಕೆ ಸಿದ್ದತೆ ನಡೆಸಲಾಗಿದೆ. ನಮ್ಮ ಆಂದೋಲನಕ್ಕೆ ಯುವಕರು ಕೈ ಜೋಡಿಸಬೇಕಿದೆ. ಬೆಳೆಯ ಬೆಲೆಯನ್ನು ರೈತರ ಮಾಡುತ್ತಾರೆ, ಸರ್ಕಾರದ ಭವಿಷ್ಯವನ್ನು ಕಿಸಾನ್ ಮಂಚ್ ಮಾಡುತ್ತದೆ ಎಂದರು. ಮಹಾಪಂಚಾಯತ್ ನಲ್ಲಿ ರೈತ ಸಂಘಟನೆಗಳು, ಜೆಡಿಎಸ್, ಕಾಂಗ್ರೆಸ್ ಮುಖಂಡರು ಸೇರಿದಂತೆ ಇತರರು ಸೇರಿ ಸುಮಾರು 8 ಸಾವಿರ ಜನ ಸೇರಿದ್ದರು.

Last Updated : Mar 21, 2021, 6:58 AM IST

ABOUT THE AUTHOR

...view details