ಶಿವಮೊಗ್ಗ:ಕಳೆದ ಏಳು ದಿನಗಳಿಂದಲೂ ಎಡಬಿಡದೇ ಸುರಿಯುತ್ತಿದ್ದ ವರುಣ ಜಿಲ್ಲೆಯಲ್ಲಿ ಇಂದು ಕೊಂಚ ಬಿಡುವು ನೀಡಿದ್ದಾನೆ.
ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆ ಆರ್ಭಟ.. ಸಹಜ ಸ್ಥಿತಿಯತ್ತ ಜನಜೀವನ.. - ಮಲೆನಾಡು ಶಿವಮೊಗ್ಗ
ಮಲೆನಾಡು ಶಿವಮೊಗ್ಗದಲ್ಲಿ ಕಳೆದ ಏಳು ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಸ್ವಲ್ಪ ಕಡಿಮೆಯಾಗಿದೆ. ತುಂಗಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆರಾಯ
ಬೆಳಗ್ಗೆಯಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ತುಂಗಾ ನದಿ ನೀರಿನ ಹರಿವಿನ ಪ್ರಮಾಣ ಸ್ವಲ್ಪ ತಗ್ಗಿದೆ. ನಿನ್ನೆ ಸೇತುವೆಗೆ ತಾಗಿಕೊಂಡು ಹರಿಯುತ್ತಿದ್ದ ನೀರು, ಇಂದು ಕಡಿಮೆಯಾಗಿದೆ. ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆ ಆರ್ಭಟ..
ಮನೆಗಳು ಜಲಾವೃತವಾಗಿ ಆಂತಕದಲ್ಲಿದ್ದ ಜನರಲ್ಲಿ ಸ್ವಲ್ಪ ಆತ್ಮವಿಶ್ವಾಸ ಮೂಡಿದೆ. ನಗರದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ.