ಶಿವಮೊಗ್ಗ:ಕೆರೆ ಅಂಗಳದಲ್ಲಿ ಮೇಯಲು ಹೋಗಿದ್ದ 13 ಕುದುರೆಗಳು ನಡುಗಡ್ಡೆಯಲ್ಲಿ ಸಿಲುಕಿದ್ದವು. ಅವುಗಳನ್ನು ಅಗ್ನಿ ಶಾಮಕದಳದವರು ರಕ್ಷಿಸಿದ್ದಾರೆ. ಶಿವಮೊಗ್ಗದ ಸೋಮಿನಕೊಪ್ಪದ ಕೆರೆಯಲ್ಲಿ ಮೊನ್ನೆ ದಿನ ಕೆರೆಯಲ್ಲಿ ನೀರು ಇಲ್ಲದ ಕಾರಣ ಕುದುರೆಗಳು ಮೇಯಲು ಹೋಗಿದ್ದವು. ಆದರೆ, ವಿಪರೀತ ಮಳೆಯಿಂದ ಕೆರೆಯಲ್ಲಿ ನೀರು ಹೆಚ್ಚಾದ ಕಾರಣ ಕುದುರೆಗಳು ದಡಕ್ಕೆ ಬಾರದೇ ಅಲ್ಲೆ ಉಳಿದು ಕೊಂಡಿವೆ.
ಶಿವಮೊಗ್ಗ: ಕೆರೆ ನಡುಗಡ್ಡೆಯಲ್ಲಿ ಸಿಲುಕಿದ್ದ 13 ಕುದುರೆಗಳ ರಕ್ಷಣೆ - ಶಿವಮೊಗ್ಗದಲ್ಲಿ ನಡುಗಡ್ಡೆಯಲ್ಲಿದ್ದ ಕುದುರೆಗಳ ರಕ್ಷಣೆ
ಕೆರೆಯಲ್ಲಿ ನೀರು ಇಲ್ಲದ ಕಾರಣ ಕುದುರೆಗಳು ಮೇಯಲು ಹೋಗಿದ್ದವು. ಆದರೆ, ವಿಪರೀತ ಮಳೆಯಿಂದ ಕೆರೆಯಲ್ಲಿ ನೀರು ಹೆಚ್ಚಾದ ಕಾರಣ ಕುದುರೆಗಳು ದಡಕ್ಕೆ ಬಾರದೇ ಅಲ್ಲೆ ಉಳಿದು ಕೊಂಡಿವೆ. ಇಂದು ಅಗ್ನಿ ಶಾಮಕದಳದವರು ಅವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆರೆ ನಡುಗಡ್ಡೆಯಲ್ಲಿ ಸಿಲುಕಿದ್ದ 13 ಕುದುರೆಗಳ ರಕ್ಷಣೆ
ಇಂದು ಮಧ್ಯಾಹ್ನ ಅಗ್ನಿಶಾಮಕ ದಳದವರು, ಬೋಟ್ನಲ್ಲಿ ತೆರಳಿ ಕುದುರೆಗಳನ್ನು ನಡುಗಡ್ಡೆಯಿಂದ ದಡಕ್ಕೆ ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ, ಜಿಲ್ಲಾ ಮುಖ್ಯಾಧಿಕಾರಿ ಅಶೋಕ ಕುಮಾರ್, ಠಾಣಾಧಿಕಾರಿ ಪ್ರವೀಣ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಭಾರಿ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ, 3 ಗ್ರಾಮಗಳ ಸಂಪರ್ಕ ಕಡಿತ
TAGGED:
shimoga horses news