ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ರೋಗದಿಂದ ಬೇಗ ಗುಣಮುಖರಾಗಲಿ ಎಂದು ಹಾರೈಸಿ, ಸಿಎಂ ತವರು ಜಿಲ್ಲೆಯ ದೇವಾಲಯ ಹಾಗೂ ಮಸೀದಿಗಳಲ್ಲಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಲಾಯಿತು.
ಶಿವಮೊಗ್ಗದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ವೀರಶೈವ ಮುಖಂಡರು ವಿಶೇಷ ಪೊಜೆ ಸಲ್ಲಿಸಿದರು. ಬೆಳಗ್ಗೆ ರುದ್ರಾಭಿಷೇಕ ನಡೆಸಲಾಯಿತು. ನಂತರ ಪೂಜೆ ಸಲ್ಲಿಸಿ ಸಿಎಂ ಬೇಗ ಗುಣಮುಖರಾಗಿ ಬರಲಿ ಎಂದು ಕಾಶಿ ವಿಶ್ವನಾಥನಲ್ಲಿ ಪ್ರಾರ್ಥನೆ ಮಾಡಲಾಯಿತು.
ಇನ್ನೊಂದೆಡೆ ನಗರದ ಮಹಾವೀರ ವೃತ್ತದ ಹಜ್ರತ್ ಸಯ್ಯದ್ ಶಾಲಿಮ್ ದಿವಾನ್ ದರ್ಗಾದಲ್ಲಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ಘನಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾದಲ್ಲಿ ವಿಶೇಷವಾದ ಚಾದರ್ ಹಾಕಿ, ಅಲ್ಲಾನಲ್ಲಿ ಸಿಎಂ ಯಡಿಯೂರಪ್ಪ ಬೇಗ ಗುಣಮುಖರಾಗಿ ನಾಡಿನ ಸೇವೆಗೆ ಬರಲಿ ಎಂದು ಪ್ರಾರ್ಥಿಸಲಾಯಿತು.
ಬಿಎಸ್ವೈ ಚೇತರಿಕೆಗಾಗಿ ಮಂದಿರ - ಮಸೀದಿಯಲ್ಲಿ ವಿಶೇಷ ಪೂಜೆ ಈ ಮೂಲಕ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಸಹ ಸಿಎಂ ಯಡಿಯೂರಪ್ಪ ಬೇಗ ಗುಣಮುಖರಾಗಿ ನಾಡಿನ ಸೇವೆಗೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.