ಶಿವಮೊಗ್ಗ:ಸರಿಯಾಗಿ ಚಿಕಿತ್ಸೆ ಸಿಗದಿರುವ ಬಗ್ಗೆ ಸಿಎಂ ತವರು ಜಿಲ್ಲೆಯಕೊರೊನಾ ವಾರಿಯರ್ಗಳಾದ ಪೊಲೀಸರು ಉಸ್ತುವಾರಿ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು: ಸಚಿವ ಈಶ್ವರಪ್ಪ ಮುಂದೆ ಅಳಲು ತೋಡಿಕೊಂಡ ಪೊಲೀಸರು
ಯಾವುದೇ ಆಸ್ಪತ್ರೆಗಳಿಗೆ ತೆರಳಿದರೂ ಪೊಲೀಸರಿಗೆ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರ ಎದುರು ಪೊಲೀಸರು ಅಳಲು ತೋಡಿಕೊಂಡಿದ್ದಾರೆ.
ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಆಯೋಜಿಸಿದ್ದ ಸಭೆಯಲ್ಲಿ ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ವಸಂತ ಕುಮಾರ್ ತಮಗಾದ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು.
ತಮ್ಮ ಇಲಾಖೆಯ ಎಎಸ್ಐ ಒಬ್ಬರು ಜ್ವರದಿಂದ ಬಳಲುತ್ತಿದ್ದು, ಮೆಗ್ಗಾನ್ ಆಸ್ಪತ್ರೆಗೆ ಹೋದಾಗ ಚಿಕಿತ್ಸೆ ನೀಡಲು ಅಲ್ಲಿನ ವೈದ್ಯರು ನಿರಾಕರಿಸಿದ್ದಾರೆ ಎಂದು ಆರೋಪಿಸಿದರು. ಬಳಿಕ ಮ್ಯಾಕ್ಸ್ ಆಸ್ಪತ್ರೆಗೆ ಹೋದಾಗಲೂ ಅಲ್ಲೂ ಕೂಡ ಚಿಕಿತ್ಸೆ ನೀಡದೆ ಕೊರೊನಾ ಪರೀಕ್ಷೆ ಮಾಡಿಕೊಂಡು ಬರುವಂತೆ ತಿಳಿಸಿದ್ದಾರೆ. ಹೀಗೆ ಮೂರು ಅಸ್ಪತ್ರೆಗಳಿಗೆ ತಿರುಗಾಡಿ ನಂತರ ಸಹ್ಯಾದ್ರಿ ನಾರಾಯಣ ಹೃದಯಾಲಯಕ್ಕೆ ಹೋಗಿ ಅಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೊರೊನಾ ವಾರಿಯರ್ಗಳಾದ ನಮಗೇ ಚಿಕಿತ್ಸೆ ಸಿಗುತ್ತಿಲ್ಲ ಎಂದು ಇನ್ಸ್ಪೆಕ್ಟರ್ ವಸಂತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.