ಕರ್ನಾಟಕ

karnataka

By

Published : Dec 22, 2019, 6:16 PM IST

ETV Bharat / state

ಹೋಂ ಶಾಪ್ 18 ಹೆಸರಲ್ಲಿ ಗೋಬಿ ಮಂಚೂರಿ ವ್ಯಾಪಾರಿಗೆ ದೋಖಾ ಮಾಡಲು ಯತ್ನ... ಕೊನೆಗೇನಾಯ್ತು?

ಆನ್​ಲೈನ್​ನಲ್ಲಿ ವಿವಿಧ ಆಮಿಷ ತೋರಿ ಮೋಸ ಮಾಡುತ್ತಾರೆ. ನಾವು ಸ್ವಲ್ಪ ಎಚ್ಚರ ವಹಿಸಿದರೆ ಮೋಸ ಹೋಗುವುದರಿಂದ ಬಚಾವ್ ಆಗಬಹುದು. ಇದಕ್ಕೆ ಶಿವಮೊಗ್ಗದಲ್ಲಿ ಒಂದು ನಿದರ್ಶನ ಲಭ್ಯವಾಗಿದೆ.

ದುಡ್ಡು ಕೊಟ್ರೇ ಬೀಳುತ್ತೆ ಪಂಗನಾಮ
ದುಡ್ಡು ಕೊಟ್ರೇ ಬೀಳುತ್ತೆ ಪಂಗನಾಮ

ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಬೆಳೆದಂತೆ ಮೋಸ ಮಾಡುವ ಹಾಗೂ ಮೋಸ ಹೋಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆನ್​ಲೈನ್​ನಲ್ಲಿ ವಿವಿಧ ಆಮಿಷ ತೋರಿ ಮೋಸ ಮಾಡುತ್ತಾರೆ. ನಾವು ಸ್ವಲ್ಪ ಎಚ್ಚರ ವಹಿಸಿದರೆ ಮೋಸ ಹೋಗುವುದರಿಂದ ಬಚಾವ್ ಆಗಬಹುದು. ಇದಕ್ಕೆ ಶಿವಮೊಗ್ಗದಲ್ಲಿ ಒಂದು ನಿದರ್ಶನ ಲಭ್ಯವಾಗಿದೆ.

ಶಿವಮೊಗ್ಗದ ಗೋಬಿ ಮಂಚೂರಿ ವ್ಯಾಪಾರಿ ದೇವರಾಜ್ ಅವರಿಗೆ ಆನ್​ಲೈನ್​ ಶಾಪ್ 18 ರಿಂದ ಒಂದು ಲೆಟರ್ ಬಂದಿತ್ತು. ಅದರಲ್ಲಿ ಒಂದು‌‌ ಸ್ಕ್ಯಾರ್ಚ್ ಕಾರ್ಡ್ ಕೂಡ ಇತ್ತು. ಈ ಕಾರ್ಡನ್ನು ಸ್ಕ್ಯಾರ್ಚ್ ಮಾಡಿದರೆ ಅದರಲ್ಲಿ ಇರುವ ಹಣವನ್ನು ನಿಮಗೆ ಕೊಡಲಾಗುತ್ತಿದೆ ಎಂದು ಹೇಳಲಾಗಿತ್ತು. ನಂತರದಲ್ಲಿ ಅದನ್ನು ನೋಡಿದಾಗ ಅದರಲ್ಲಿ ‌ ₹ 8.50 ಲಕ್ಷ ರೂ. ಬಂದಿತ್ತು. ನಂತರ ಒಂದು ಪೋನ್ ಕರೆ ಬಂದು, ನಿಮಗೆ ₹ 8.50 ಲಕ್ಷ ಬಂದಿದೆ. ನೀವು ನಮಗೆ ಟ್ಯಾಕ್ಸ್ ಹಣವಾಗಿ‌ ₹ 8 ಸಾವಿರ ನಮ್ಮ ಖಾತೆಗೆ ಹಾಕಿ ಎಂದು ಹೇಳಿದ್ದಾರೆ.

ದುಡ್ಡು ಕೊಟ್ರೇ ಬೀಳುತ್ತೆ ಪಂಗನಾಮ

ಆದರೆ ಇದರ ಬಗ್ಗೆ ಎಚ್ಚರವಹಿಸಿದ ದೇವರಾಜ್ ಹಣವನ್ನು ಹಾಕದೇ ವಾಪಸ್ ಬಂದಿದ್ದಾರೆ. ಬಳಿಕ ಪೊಲೀಸರಿಗೆ ಈ ಮಾಹಿತಿ ತಿಳಿಸಿದಾಗ ಅದು ನಕಲಿ ಎಂದು ಗೊತ್ತಾಗಿದೆ. ಕಳೆದ ಆರು ತಿಂಗಳ ಹಿಂದೆ ಆನ್​ಲೈನ್​ನ ಹೋಂ ಶಾಪ್ 18 ನಲ್ಲಿ ದೇವರಾಜ್, ₹ 4,500 ಕೊಟ್ಟು ಒಂದು‌ ಟ್ಯಾಬ್ ಖರೀದಿ ಮಾಡಿದ್ದರು. ಅದು ಕೇವಲ ಒಂದು ತಿಂಗಳು ಸಹ ಸರಿಯಾಗಿ ಕಾರ್ಯ ನಿರ್ವಹಿಸದೇ ಹಾಳಾಗಿ ಹೋಗಿದೆ. ಇದರಿಂದ ಒಮ್ಮೆ ಮೋಸ ಹೋದ ದೇವರಾಜ್, ಪೊಲೀಸರ ಸಲಹೆ ಮೇರೆಗೆ ಮೋಸ ಹೋಗುವುದರಿಂದ ಬಚಾವ್ ಆಗಿದ್ದಾರೆ.

ABOUT THE AUTHOR

...view details