ಶಿವಮೊಗ್ಗ: ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಸರಣಿಯ ಶೂಟಿಂಗ್ ನಡೆದ ಅರಸಾಳು ರೈಲ್ವೆ ನಿಲ್ದಾಣ ಈಗ ಮಾಲ್ಗುಡಿ ಮ್ಯೂಸಿಯಂ ಆಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಮಾಲ್ಗುಡಿ ಮ್ಯೂಸಿಯಂ ವೀಕ್ಷಿಸಿದ ಸಂಸದ ಬಿ.ವೈ ರಾಘವೇಂದ್ರ - Malgudi cinema
ಸಂಸದ ಬಿವೈ ರಾಘವೇಂದ್ರ ಅರಸಾಳು ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಕಾಲ್ಪನಿಕ ಮಾಲ್ಗುಡಿ ಮ್ಯೂಸಿಯಂಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮೊದಲಿಗೆ ಕೇವಲ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲುಗಡೆ ಆಗುತ್ತಿದ್ದವು. ಇಂದು ಎಲ್ಲಾ ರೈಲುಗಳು ನಿಲುಗಡೆ ಆಗುತ್ತಿವೆ ಎಂದರು.

ಈ ಮಾಲ್ಗುಡಿ ರೈಲ್ವೆ ನಿಲ್ದಾಣಕ್ಕೆ ಇತಿಹಾಸ ಇದೆ. ಶಂಕರ್ ನಾಗ್ ಅವರ ಮಾಲ್ಗುಡಿ ಸರಣಿಯ ಶೂಟಿಂಗ್ ನಡೆದದ್ದು ಇಲ್ಲಿಯೇ. 400 ಕೋಟಿ ವೆಚ್ಚದಲ್ಲಿ ರೈಲ್ವೆ ಪ್ಲಾಟ್ ಫಾರಂ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಹಿನ್ನೆಲೆ ಎರಡು ತಾಲೂಕಿನ ಜನರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.